ರಾಷ್ಟ್ರೀಯ

ಪುಲ್ವಾಮ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಸಿಆರ್ ಪಿಎಫ್ ಯೋಧರು

Pinterest LinkedIn Tumblr

ನವದೆಹಲಿ: ಪುಲ್ವಾಮದಲ್ಲಿ ಸೇನಾ ಯೋಧರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 40 ಮಂದಿ ಯೋಧರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಿಆರ್ ಪಿಎಫ್ ಈ ಹೇಯ ಕೃತ್ಯವನ್ನು ನಾವು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದೂ ಇಲ್ಲ ಎಂದು ಸಿಆರ್ ಪಿಎಫ್ ಯೋಧರು ಹೇಳಿದ್ದಾರೆ.

ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮವಾದ ತಮ್ಮ ಸಹೋದರರ ಕುಟುಂಬದ ಜೊತೆ ನಾವಿರುತ್ತೇವೆ, ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇನ್ನೂ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಪುಲ್ವಾಮಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಅದಾದ ನಂತರ ಶ್ರೀನಗರಕ್ಕೆ ತೆರಳಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡರು.

Comments are closed.