ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿಕೆ ನೀಡಿದ್ದರು, ಆದರೆ ಅದರ ಬೆನ್ನಲ್ಲೇ ನಟ ರಜನಿಕಾಂತ್ ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.
ರಜನಿಕಾಂತ್- ವಿಜಯ್ ಕಾಂತ್ ಭೇಟಿ ಎಲ್ಲರಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ, ಆದರೆ ಇದು ರಾಜಕೀಯ ಭೇಟಿಯಲ್ಲ, ಅವರ ಆರೋಗ್ಯ ವಿಚಾರಿಸಲು ಅವರ ನಿವಾಸಕ್ಕೆ ತೆರಳಿದ್ದಾಗಿ ರಜನೀಕಾಂತ್ ಹೇಳಿದ್ದಾರೆ.
ಇದರಲ್ಲಿ ಯಾವುದೇ ರಾಜಕೀಯ ಬೆರೆಸಬೇಡಿ ಎಂದು ನಟ ರಜನಿಕೀಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.. ಲೋಕಸಭೆ ಚುನಾವಣೆಯಲ್ಲಿ ಪಿಎಂಕೆಗೆ ನೀಡುವಷ್ಟೇ ಸೀಟುಗಳನ್ನು ಸಮಾನವಾಗಿ ಡಿಎಂಡಿಕೆಗೂ ನೀಡಬೇಕು ಎನ್ನುವುದು, ವಿಜಯ್ ಕಾಂತ್ ವಾದ. ಪಿಎಂಕೆ 7 ಸೀಟು ನೀಡಲಾಗಿದ್ದು ಡಿಎಂಡಿಕೆಗೆ ಅದಕ್ಕಿಂತ ಒಂದು ಹೆಚ್ಚಿನ ಸೀಟು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Comments are closed.