ರಾಷ್ಟ್ರೀಯ

ಈ ಬಾರಿ ಪಾಕ್ ಒಳಗೆ ನುಗ್ಗಿಉಗ್ರರ ಅಡಗುದಾಣಗಳನ್ನು ಭಸ್ಮ ಮಾಡಲು ಐಎಎಫ್ ಮಿರಾಜ್-2000 ನ್ನೇ ಆಯ್ಕೆ ಮಾಡಲು ಕಾರಣ ಏನು ಗೊತ್ತೇ..?

Pinterest LinkedIn Tumblr

ನವದೆಹಲಿ: ಪುಲ್ವಾಮ ದಾಳಿಯ ನಂತರ ಭಾರತ ಎಲ್ಒಸಿ ದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ಹಿಂದಿನ ಸರ್ಜಿಕಲ್ ಸ್ಟ್ರೈಕ್ ಗಿಂತಲೂ ತೀವ್ರವಾಗಿ ಈ ಬಾರಿ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಈ ಮೂಲಕ ಭಾರತ ಪಾಕಿಸ್ತಾನಕ್ಕೆ ತಡೆಯಲಾಗದ ಹೊಡೆತ ನೀಡಿದೆ.

ಪಾಕಿಸ್ತಾನದ ಉಗ್ರರ ಅಡಗುದಾಣಗಳನ್ನು ಭಸ್ಮ ಮಾಡಲು ಭಾರತದ ವಾಯುಪಡೆ ಆಯ್ಕೆ ಮಾಡಿಕೊಂಡಿದ್ದು ಮಿರಾಜ್-2000 ಫೈಟರ್ ಜೆಟ್, ಎಲ್ಲಾ ರೀತಿಯ ವಾತಾವರಣದಲ್ಲೂ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಮಿರಾಜ್-2000 ಫೈಟರ್ ಜೆಟ್, ಕಾರ್ಗಿಲ್ ಯುದ್ಧದ ವಿಜಯದಲ್ಲೂ ಮಹತ್ವದ ಪಾತ್ರ ವಹಿಸಿತ್ತು. ಥೇಲ್ಸ್ RDY 2 ರೇಡಾರ್ ನ್ನು ಹೊಂದಿರುವ ಮಿರಾಜ್-2000 ಟಾರ್ಗೆಟ್ ನ್ನು ಸ್ವಯಂ ಚಾಲಿತವಾಗಿ ಟ್ರಾಕ್ ಮಾಡುವ ಸಾಮರ್ಥ್ಯ ಹೊಂದಿದೆ.

ಸುಮಾರು 500 ಮೀಟರ್ ಗಳ ರೇಡಿಯಸ್ ವ್ಯಾಪ್ತಿಯಲ್ಲಿ ನಿಖರವಾಗಿ ಲೇಸರ್ ಗೈಡೆಡ್ ಬಾಂಬಿಂಗ್ ಮಾಡಬಹುದಾಗಿದೆ. ಜೊತೆಗೆ ಟಾರ್ಗೆಟ್ ಗಳನ್ನು ಮ್ಯಾಪಿಂಗ್ ಮಾಡುವುದಕ್ಕೆ ಡೋಪ್ಲರ್ ಬೀಮ್-ಶಾರ್ಪೆನಿಂಗ್ ತಂತ್ರಜ್ಞಾನ ಹಾಗೂ ಹಾರಾಟದ ಸಮಯದಲ್ಲಿ ಪ್ರತಿ ಗಂಟೆಗೆ 900 ಕಿಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು, ಎಂಬಿಡಿಎ ಅರ್ಮಾತ್ ರಾಡಾರ್ ಕ್ಷಿಪಣಿ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಕಾರಣಕ್ಕಾಗಿ ಮಿರಾಜ್-2000 ನ್ನು ವೈಮಾನಿಕ ದಾಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಟಾರ್ಗೆಟ್ ಗಳನ್ನು ನಿಖರವಾಗಿ ಫಿಕ್ಸ್ ಮಾಡಲು ಹಿರೋನ್ ಸರ್ವೇಕ್ಷಣಾ ವಿಮಾನವೂ ಸಹ ಸಾಥ್ ನೀಡಿದೆ.

Comments are closed.