ರಾಷ್ಟ್ರೀಯ

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಲು ಹೊರಟಾಗ ಎಲ್ಲಿದ್ರು ಪ್ರಧಾನಿ ಮೋದಿ?

Pinterest LinkedIn Tumblr

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯ ಪಿನ್ ಟು ಪಿನ್ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿದ್ದರು.

ಪ್ರಧಾನಿ ನರೇಂದ್ರ ಮೋದಿ, ಮಧ್ಯರಾತ್ರಿ 3-30ರವರೆಗೂ ಪ್ರಧಾನಿ ಕಚೇರಿಯಲ್ಲೇ ಇದ್ದು, ದಾಳಿಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ದಾಳಿಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದ ಮೋದಿ, ದಾಳಿ ಯಶಸ್ವಿಯಾದ ನಂತರವಷ್ಟೇ ಪ್ರಧಾನಿ ಕಚೇರಿಯಿಂದ ತೆರಳಿದರು.

ಈ ವೇಳೆ ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋಔಲ್ ಕೂಡ ಜೊತೆಗಿದ್ದು, ವಾಯುಸೇನೆ ಮುಖ್ಯಸ್ಥರು ಆಪರೇಷನ್‌ ಮೇಲುಸ್ತುವಾರಿ ವಹಿಸಿದ್ದರು.

Comments are closed.