ರಾಷ್ಟ್ರೀಯ

ವಾಯುಸೇನೆಯಿಂದ ಉಗ್ರರ ಮೇಲಿನ ದಾಳಿ ಕ್ಷಣಾರ್ಧದಲ್ಲಿ ಎಲ್ಲಾ ಮುಗಿದೋಯ್ತು!

Pinterest LinkedIn Tumblr


ನವದೆಹಲಿ: ಪುಲ್ವಾಮಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಾಗಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಡಗುತಾಣದ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

ದಾಳಿಯಲ್ಲಿ ಸುಮಾರು 300 ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್‌ಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಈ ಮಧ್ಯೆ ದಾಳಿಯ ಸಂಪೂರ್ಣ ವಿವರವನ್ನು ವಿದೇಶಾಂಗ ಇಲಾಖೆ ನೀಡಿದೆ.

ದಾಳಿ ಏಕೆ?:

ಪುಲ್ವಾಮಾ ದಾಳಿ ನಂತರ ಮತ್ತೆ ಭಾರತೀಯ ಸೈನಿಕರ ರಕ್ತಕ್ಕಾಗಿ ಹಾತೋರೆಯುತ್ತಿದ್ದ ಪಾಕ್ ಉಗ್ರರು, ಮತ್ತೊಮ್ಮೆ ಭಾರತೀಯ ಸೈನಿಕ ನೆಲೆಗಳ ಮೇಲೆ ದಾಳಿ ಮಾಡಲು ಯೋಜನೆ ಸಿದ್ದಪಡಿಸಿದ್ದರು ಎನ್ನಲಾಗಿದೆ.

ಪ್ರಸ್ತುತ ದಾಳಿ ನಡೆದಿರುವ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಕ್ಯಾಂಪ್‌ನಲ್ಲಿ ಮತ್ತೊಂದು ದಾಳಿಯ ಯೋಜನೆ ಸಿದ್ಧಪಡಿಸಲಾಗುತ್ತಿತ್ತು. ಅಲ್ಲದೇ ಭೀಕರ ದಾಳಿಗೆ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಗೆಡವಿತ್ತು.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ವಾಯುಸೇನೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಲು ಯೋಜನೆ ಸಿದ್ದಪಡಿಸಿತು. ಅದರಂತೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ದಾಳಿಯ ಯೋಜನೆ ಸಿದ್ದಪಡಿಸಿ ಕಾರ್ಯಾಚರಣೆ ನಡೆಸಲಾಗಿದೆ.

ದಾಳಿ ಹೇಗೆ?:

ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿರುವ ಜೆಇಎಮ್ ಉಗ್ರರ ಕ್ಯಾಂಪ್ ಮೇಲೆ, ಭಾರತೀಯ ವಾಯುಸೇನೆಯ 12 ಮಿರಾಜ್-2000 ಫೈಟರ್ ಜೆಟ್ ಮೂಲಕ ವಾಯು ದಾಳಿ ನಡೆಸಲಾಗಿದೆ. ಕೇವಲ 21 ನಿಮಿಷದಲ್ಲಿ ಸಂಪೂರ್ಣವಾಗಿ ಉಗ್ರರ ಕ್ಯಾಂಪ್ ಧ್ವಂಸ ಮಾಡಲಾಗಿದ್ದು, ಒಟ್ಟು 1,000 ಕೆಜಿ ಬಾಂಬ್ ಹಾಕಲಾಗಿದೆ.

ಈ ಮಧ್ಯೆ ಪಾಕಿಸ್ತಾನ ಕೂಡ ದ್ರೋಣ್ ಮೂಲಕ ಭಾರತೀಯ ವಾಯುಪಡೆ ಮೇಲೆ ದಾಳಿ ಮಾಡಲು ಮುಂದಾಯಿತಾದರೂ, ಪಾಕ್ ದ್ರೋಣ್‌ಗಳನ್ನು ಹೊಡೆದುರುಳಿಸುವಲ್ಲಿ ನಮ್ಮ ಪೈಲೆಟ್‌ಗಳು ಯಶಸ್ವಿಯಾಗಿದ್ದಾರೆ. ದಟ್ಟ ಅರಣ್ಯ ಪ್ರದೇಶಲ್ಲಿ ಗುಪ್ತ ಠಿಕಾಣಿ ಹೊಂದಿದ್ದ ಉಗ್ರರ ಎಲ್ಲಾ ನೆಲೆಗಳನ್ನು ಕ್ಷಣಾರ್ಧದಲ್ಲಿ ಭಾರತೀಯ ವಾಯುಸೇನೆಯ ಪೈಲೆಟ್‌ಗಳು ನಾಶ ಮಾಡಿದ್ದಾರೆ.

ದಾಳಿಯಲ್ಲಿ ಮಸೂದ್ ಅಳಿಯ ಮಟಾಶ್:

ಹೌದು, ಬಾಲಾಕೋಟ್ ದಾಳಿಯಲ್ಲಿ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅಳಿಯ ಮೌಲಾನಾ ಯುಸೂಫ್ ಅಜರ್ ಅಲಿಯಾಸ್ ಉಸ್ತಾದ್ ಘೋರಿ ಕೂಡ ಸಾವನ್ನಪ್ಪಿದ್ದಾನೆ. ದಾಳಿ ಸಮಯದಲ್ಲಿ ಉಗ್ರ ಕ್ಯಾಂಪ್‌ನಲ್ಲೇ ವಾಸ್ತವ್ಯ ಹೂಡಿದ್ದ ಘೋರಿ, ಭಾರತದ ಮೇಲೆ ಮತ್ತೊಂದು ದಾಳಿಯ ಯೋಜನೆ ಸಿದ್ದಪಡಿಸುತ್ತಿದ್ದ ಎನ್ನಲಾಗಿದೆ.

3-30ರವೆರೆಗೂ ಪ್ರಧಾನಿ ಕಚೇರಿಯಲ್ಲೇ ಇದ್ದ ಮೋದಿ:

ಇನ್ನು ಪ್ರಧಾನಿ ನರೇಂದ್ರ ಮೋದಿ, ಮಧ್ಯರಾತ್ರಿ 3-30ರವರೆಗೂ ಪ್ರಧಾನಿ ಕಚೇರಿಯಲ್ಲೇ ಇದ್ದು ದಾಳಿಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ದಾಳಿಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದ ಮೋದಿ, ದಾಳಿ ಯಶಸ್ವಿಯಾದ ನಂತರವಷ್ಟೇ ಪ್ರಧಾನಿ ಕಚೇರಿಯಿಂದ ತೆರಳಿದರು.

Comments are closed.