ರಾಷ್ಟ್ರೀಯ

ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನ ಸೈನಿಕರ ವಶಕ್ಕೆ ಸಿಲುಕ್ಕಿದ್ದು ಹೇಗೆ ಗೊತ್ತೇ…? ಇಲ್ಲಿದೆ ನೋಡಿ…

Pinterest LinkedIn Tumblr

ನವದೆಹಲಿ: ಪಾಕಿಸ್ತಾನ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ.

ಈ ಮಧ್ಯೆ ಅಭಿನಂದನ್ ಅವರು ಪಾಕಿಸ್ತಾನ ಸೈನಿಕರ ವಶಕ್ಕೆ ಸಿಲುಕ್ಕಿದ್ದು ಹೇಗೆ ಎಂಬ ವಿವರ ಇಲ್ಲಿದೆ. ಫೆ.14ರ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಫೆಬ್ರವರಿ 26ರಂದು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂದಿರುಗಿದ್ದವು.

ಇದಕ್ಕೆ ಪ್ರತಿಯಾಗಿ ಫೆಬ್ರವರಿ 27ರಂದು ಬೆಳಗ್ಗೆ ಪಾಕಿಸ್ತಾನದ ಮೂರು ಎಫ್-16 ಯುದ್ಧ ವಿಮಾನಗಳು ವಾಯುಸೀಮೆಯನ್ನು ದಾಟಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿತ್ತು. ಈ ವೇಳೆ ಭಾರತೀಯ ವಾಯುಸೇನೆಯ ಮಿಗ್-21 ಹಾಗೂ ಸುಖೋಯ್ ಯುದ್ಧ ವಿಮಾನಗಳು ಎಫ್-16ಗೆ ಮುಖಾಮುಖಿಯಾಗಿದ್ದವು. ಭಾರತೀಯ ಯುದ್ಧ ವಿಮಾನಗಳು ಕಂಡ ತಕ್ಷಣ ಎಫ್-16 ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಪಲಾಯನ ಮಾಡುವ ವೇಳೆ ಮಿಗ್-21 ಹಾಗೂ ಸುಖೋಯ್ ವಿಮಾನ ಹಿಂದೆ ನುಗ್ಗಿ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಿತ್ತು.

ಈ ವೇಳೆ ಮಿಗ್-21 ಹಾರಿಸುತ್ತಿದ್ದ ಅಭಿನಂದನ್ ವರ್ತಮಾನ್ ಅವರು ಎಫ್-16 ಅನ್ನು ಅಡ್ಡಗಟ್ಟಿ ಹೊಡೆದುರುಳಿಸಬೇಕು ಅನ್ನುವ ಯೋಚನೆಯಿಂದ ಅಭಿನಂದನ್ ತಮ್ಮ ವಿಮಾನವನ್ನು ಎಫ್-21 ಬೆನ್ನಟ್ಟಿ ಹೋಗುತ್ತಿದ್ದರು. ಈ ವೇಳೆ ಸುಖೋಯ್ ಯುದ್ಧ ವಿಮಾನ ಒಂದು ಎಫ್-16 ಅನ್ನು ಹೊಡೆದುರುಳಿಸಿತು. ಅಷ್ಟರಲ್ಲಿ ಅಭಿನಂದನ್ ಹಾರಿಸುತ್ತಿದ್ದ ಮಿಗ್-21 ಅನ್ನು ಭಾರತ ಗಡಿದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿತ್ತು. ಈ ವೇಳೆ ಪಾಕಿಸ್ತಾನ ಕಡೆಯಿಂದ ಕ್ಷಿಪಣಿಯೊಂದು ಬಂದು ಮಿಗ್-21 ಗೆ ಬಡಿಯಿತು. ಈ ವೇಳೆ ಅಭಿನಂದನ್ ವಿಮಾನದಿಂದ ಜಿಗಿದಿದ್ದಾರೆ.

ಪ್ಯಾರಾಚೂಟ್ ಮೂಲಕ ಕೆಳಗೆ ಬಿದ್ದ ಅಭಿನಂದನ್ ಕೂಡಲೇ ಅಲ್ಲಿ ನೆರೆದಿದ್ದ ಯುವಕರು ನಾನು ಎಲ್ಲಿದ್ದೇನೆ ಎಂದು ಕೇಳಿದ್ದಾರೆ. ಅದಕ್ಕೆ ಯುವಕರು ಮೊದಲಿಗೆ ಇದು ಭಾರತ ಎಂದ ಹೇಳಿದ್ದಾರೆ. ನಂತರ ಯುವಕರು ಪಾಕಿಸ್ತಾನ್ ಕೀ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಅಲ್ಲಿಗೆ ಅಭಿನಂದನ್ ಅವರಿಗೆ ತಾವು ಎಲ್ಲಿದ್ದೇವೆ ಎಂಬ ಪರಿಸ್ಥಿತಿಯ ಅರಿವಾಗಿ ಕೂಡಲೇ ತಮ್ಮ ಬಳಿಯಿದ್ದ ಪಿಸ್ತೂಲ್ ಅನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಹತ್ತಿರ ಬರದಂತೆ ಯುವಕರಿಗೆ ಎಚ್ಚರಿಸಿದ್ದಾರೆ. ಇದಕ್ಕೂ ಹೆದರದ ಯುವಕರು ಮುನ್ನುಗಿದ್ದಾಗ ಅಭಿನಂದನ್ ಅಲ್ಲಿಂದ ಸುಮಾರು 1 ಕಿ.ಮೀ ದೂರು ಓಡಿ ಬಂದಿದ್ದಾರೆ. ಯುವಕರು ಹಿಂಬಾಲಿ ಬಂದಿದ್ದು ಅಲ್ಲದೆ ಕಲ್ಲು ತೂರುತ್ತಿದ್ದರಿಂದ ಅಭಿನಂದನ್ ಕೂಡಲೇ ಅಲ್ಲೇ ಇದ್ದ ಹಳ್ಳಕ್ಕೆ ಇಳಿದು ಬಚ್ಚಿಟ್ಟುಕೊಂಡಿದ್ದಾರೆ. ಬಳಿಕ ನೀವು ಏನು ಮಾಡದಿದ್ದರೆ ನಾನು ನಿಮ್ಮ ಬಳಿ ಬರುತ್ತೇನೆ ಅಂತಾ ಹೇಳಿದ್ದಾರೆ. ಈ ವೇಳೆ ಹತ್ತಿರಕ್ಕೆ ಬಂದ ಅಭಿನಂದನ್ ಅವರನ್ನು ಯುವಕರು ಗುಂಪು ಥಳಿಸಿದೆ. ಈ ವೇಳೆ ಅಲ್ಲಿಗೆ ಬಂದ ಪಾಕ್ ಸೇನೆಯ ಸೈನಿಕರು ಸಹ ಅಭಿನಂದನ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಗೆ ಬಂದ ಪಾಕ್ ಸೇನೆಯ ಮೇಜರ್ ಒಬ್ಬರು ಯಾರೂ ಅವರ ಮೇಲೆ ಹಲ್ಲೆ ಮಾಡಬೇಡಿ ಎಂದು ಹೇಳಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಹೀಗೆ ಎಫ್-16 ವಿಮಾನವನ್ನು ಹೊಡೆದುರುಳಿಸುವ ಭರದಲ್ಲಿ ಅಭಿನಂದನ್ ಅವರಿಗೆ ಗಡಿ ದಾಟಿದ್ದು ಗೊತ್ತಾಗಲೇ ಇಲ್ಲ.

Comments are closed.