ನವದೆಹಲಿ: ಭಾರತೀಯ ವಾಯಸೇನೆಯ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು ಈ ಮಧ್ಯೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಬಂಧಿಸಿದ್ದು ಅವರನ್ನು ಕೂಡಲೇ ಭಾರತಕ್ಕೆ ಕಳುಹಿಸಿ ಎಂಬ ಕೂಗೂ ಪಾಕಿಸ್ತಾನದಲ್ಲಿ ವ್ಯಾಪಕವಾಗುತ್ತಿದೆ.
ನಿನ್ನೆ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಜೆಟ್ ಪತನಗೊಂಡಿತ್ತು. ಈ ವೇಳೆ ವಿಂಗ್ ಕಮಾಂಡರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಇಳಿದಿದ್ದರು. ಆಗ ಅಲ್ಲಿನ ಜನತೆ ಅಭಿನಂದನ್ ರನ್ನು ಹಿಡಿದು ಚೆನ್ನಾಗಿ ಥಳಿಸಿದ್ದು ಈ ವೇಳೆ ಅಲ್ಲಿಗೆ ಬಂದ ಪಾಕ್ ಸೇನೆ ಅಭಿನಂದನ್ ರನ್ನು ತಮ್ಮ ವಶಕ್ಕೆ ಪಡೆದರು.
ಇದೀಗ ದೇಶಾದ್ಯಂತ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಬರಲಿ ಎಂಬ ಕೂಗು ಜೋರಾಗಿದೆ. ಇದೇ ವೇಳೆ ಪಾಕಿಸ್ತಾನದಲ್ಲೂ ಸಹ ಸ್ಥಳೀಯರು ಸಾಮಾಜಿಕಾ ಜಾಲತಾಣಗಳಲ್ಲಿ ಅಭಿನಂದನ್ ರನ್ನು ಭಾರತಕ್ಕೆ ಕಳುಹಿಸಿ ಎಂಬ ಸಂದೇಶಗಳನ್ನು ಹಾಕುವ ಮೂಲಕ ಬಹಿರಂಗವಾಗಿ ಭಾರತಕ್ಕೆ ನೆರವಾಗುತ್ತಿದ್ದಾರೆ.
ರಾಷ್ಟ್ರೀಯ
Comments are closed.