ರಾಷ್ಟ್ರೀಯ

ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದ ಜೈಶ್ ಉಗ್ರರು ಸಾವನ್ನಪ್ಪಿದ್ದಾರೆ ! ಈ ಸತ್ಯ ಬಹಿರಂಗಪಡಿಸಿದ್ದು ಯಾರು ಗೊತ್ತೇ…?

Pinterest LinkedIn Tumblr

ನವದೆಹಲಿ: ಇತ್ತ ಭಾರತದಲ್ಲಿ ವಿಪಕ್ಷಗಳು ಭಾರತೀಯ ವಾಯುಸೇನೆಯ ದಾಳಿ ಕುರಿತು ಶಂಕೆ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಅತ್ತ ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದ ಜೈಶ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸ್ವತಃ ಮಸೂದ್ ಅಜರ್ ಸಹೋದರ ಮೌಲಾನ ಅಮ್ಮರ್ ಒಪ್ಪಿಕೊಂಡಿದ್ದಾನೆ.

ಈ ಬಗ್ಗೆ ಮೌಲಾನ ಅಮ್ಮರ್ ಮಾತನಾಡಿರುವ ಆಡಿಯೋ ಕ್ಲಿಪ್ ಒಂದು ಬಿಡುಗಡೆಯಾಗಿದ್ದು, ಆಡಿಯೋದಲ್ಲಿ ಬಾಲ್​​ಕೋಟ್ ನಲ್ಲಿರುವ ಉಗ್ರ ಶಿಬಿರಗಳನ್ನು ಭಾರತ ನಾಶ ಮಾಡಿದ್ದು ಹೌದು ಎಂದು ಹೇಳಿದ್ದಾನೆ. ಆ ಮೂಲಕ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಬೀಗುತ್ತಿದ್ದ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಸೇನೆಗೆ ಅಮ್ಮರ್ ಹೇಳಿಕೆ ತೀವ್ರ ಇರುಸುಮುರುಸು ಉಂಟುಮಾಡಿದೆ.

‘ಭಾರತೀಯ ವಾಯುಪಡೆ ಐಎಸ್​ಐ ಅಥವಾ ಪಾಕಿಸ್ತಾನದ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಅವರು ಅಟ್ಯಾಕ್ ಮಾಡಿದ್ದು ಜಿಹಾದ್​ ವಿಚಾರವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ.. ಭಾರತೀಯ ವಾಯುಸೇನೆ ಟಾರ್ಗೆಟ್ ಪಾಕಿಸ್ತಾನೆ ಅಥವಾ ಐಎಸ್ ಐ ಅಲ್ಲ. ಜೈಶ್ ತರಬೇತಿ ಕೇಂದ್ರಗಳೇ ಟಾರ್ಗೆಟ್ ಆಗಿತ್ತು ಎಂದು ಕಿಡಿಕಾರಿದ್ದಾನೆ. ಅಲ್ಲದೆ ಈ ದಾಳಿಗೆ ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾನೆ.

ಇನ್ನು ಬಾಲ್​ಕೋಟ್​ ದಾಳಿಯಲ್ಲಿ ಐಎಸ್​ಐನ ಕರ್ನಲ್​ ಸಲೀಮ್​ ಖ್ವಾರಿ ಹಾಗೂ ಜೈಷ್​​​ ತರಬೇತುದಾರ ಮೌಲಾನ್​ ಮೋಯಿನ್​ ಕೂಡ ಸತ್ತಿದ್ದಾರೆ ಎನ್ನಲಾಗಿದೆ.

Comments are closed.