ಚೆನ್ನೈ: ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ಸಚಿವ ಪಿ.ಚಿದಂಬರಂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಹಾಡಿಹೊಗಳಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಹಮ್ಮಿಕೊಂಡಿರುವ ಗಂಗಾ ಸ್ವಚ್ಛತಾ ಅಭಿಯಾನ, ಹೆದ್ದಾರಿಗಳ ನಿರ್ಮಾಣ ಹಾಗೂ ಆಧಾರ್ ಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶಂಸಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರವನ್ನು ಪ್ರಶಂಸಿಸಿರುವ ಕಾಂಗ್ರೆಸ್ ನಾಯಕ ಚಿದಂಬರಂ ಧೃಡ ನಿರ್ಧಾರ ಹಾಗೂ ಪರಿಶ್ರಮದಿಂದ ಗಂಗಾ ನದಿ ಶುದ್ಧಗೊಂಡಿದೆ. ಈ ವಿಚಾರವಾಗಿ ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಎನ್ ಡಿ ಎ ಸರ್ಕಾರ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯಕ್ರಮವೂ ಯಶಸ್ಸು ಕಂಡಿದೆ. ಇಷ್ಟೇ ಅಲ್ಲದೆ ಆಧಾರ್ ಜಾರಿಗೊಳಿಸಿ ಇದನ್ನು ಮತ್ತಷ್ಟು ಬಲಪಡಿಸಿದೆ ಎಂದು ತಿಳಿಸಿದ್ದಾರೆ.
ಆದರೆ ನೋಟು ಅಮಾನ್ಯೀಕರಣ ನಿರ್ದಾರದಿಂದಾಗಿ ನನಗೆ ತುಂಬಾ ಕೋಪ ಬಂದಿದೆ,. ಜೊತೆಗೆ ಜಿಎಸ್ ಟಿ ಎಂಬುದು ಅತಿದೊಡ್ಡ ತಪ್ಪು ಎಂದು ತಿಳಿಸಿದ್ದಾರೆ.
Comments are closed.