ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಸ್ಥರಿಗೆ ಮುಂಬೈನ ಅಂಧ ವಿಜ್ಞಾನಿಯೊಬ್ಬರು 110 ಕೋಟಿ ರೂ. ನೆರವು ನೀಡಿದ್ದಾರೆ.
ರಾಜಸ್ಥಾನದ ಕೋಟ ಮೂಲದ ವಿಜ್ಞಾನಿ ಮುರ್ತಜಾ ಎ. ಹಮೀದ್ ರಾಷ್ಟ್ರೀಯ ಪರಿಹಾರ ನಿಧಿಗೆ 110 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಮುರ್ತಜಾ ಎ. ಹಮೀದ್ ಅವರು ‘ಫ್ಯೂಯಲ್ ಬರ್ನ್ ರೇಡಿಯೇಷನ್ ಟೆಕ್ನಾಲಜಿ’ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಬಳಸಿ ಜಿಪಿಎಸ್, ಕ್ಯಾಮರಾ ಮತ್ತು ಇತರೆ ಉಪಕರಣಗಳ ಸಹಾಯವಿಲ್ಲದೆ ಚಲಿಸುತ್ತಿರುವ ಯಾವುದೇ ವಾಹನವನ್ನು ಪತ್ತೆ ಹಚ್ಚಬಹುದು. ಈ ಸಂಬಂಧ ಹಮೀದ್ ಅವರು ಸೆಪ್ಟೆಂಬರ್ 2016ರಲ್ಲಿ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. 2018ರ ಅಕ್ಟೋಬರ್ನಲ್ಲಿ ಇದಕ್ಕೆ ಅನುಮೋದನೆ ದೊರೆತಿದ್ದು ಎಂದು ಹಮೀದ್ ತಿಳಿಸಿದ್ದಾರೆ.
Comments are closed.