ನವದೆಹಲಿ: ಚುನಾವಣಾ ಪ್ರಚಾರಕ್ಕೆ ಸೇನೆ ಹಾಗೂ ಸೈನಿಕರ ಚಿತ್ರಗಳನ್ನು ರಾಜಕೀಯ ಪಕ್ಷಗಳು, ಮುಖಂಡರು ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಇಂದು ಮಹತ್ವದ ಆದೇಶ ಹೊರಡಿಸಿದೆ.
ಭದ್ರತಾ ಪಡೆಗಳು ರಾಜಕೀಯ ವ್ಯವಸ್ಥೆ, ಭದ್ರತೆಯ ರಕ್ಷಕರಾಗಿದ್ದು, ಆಧುನಿಕ ಪ್ರಜಾಪ್ರಭುತ್ವದಲ್ಲಿ ತಟಸ್ಥ ಪಾಲುದಾರರಾಗಿದ್ದಾರೆ. ಆದ್ದರಿಂದಾಗಿ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಯಾವುದೇ ಕಾರಣಕ್ಕೂ ಪ್ರಚಾರದ ಸಂದರ್ಭದಲ್ಲಿ ಸೇನೆಯ ಹಾಗೂ ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚುನಾವಣಾ ಪ್ರಚಾರ ಅಥವಾ ಜಾಹಿರಾತುಗಳಲ್ಲಿ ಸೇನೆಯ, ಸೈನಿಕರ ಚಿತ್ರಗಳನ್ನು ಬಳಸದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳಿಗೆ ಸಲಹೆ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.
Comments are closed.