ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ.. ಅವರ ಆಡಳಿತದಲ್ಲಿ ಜನ ಹೆದರಿಕೆಯಲ್ಲಿ ಬದುಕುತ್ತಿದ್ದಾರೆ.. ಅವರನ್ನು ನೋಡಿದರೆ ಉಗ್ರಗಾಮಿಯಂತೆ ಕಾಣಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ವಿಜಯ್ ಶಾಂತಿ ಹೇಳಿದ್ದಾರೆ.
ತೆಲಂಗಾಣದ ಶಂಶಾಬಾದ್ನಲ್ಲಿ ಇಂದು ಸಂಜೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ ಮುಂಚೆ ಮಾತನಾಡಿದ ವಿಜಯಶಾಂತಿ ಈ ರೀತಿಯ ವಿವಾದಕ್ಕೀಡಾಗುವ ಹೇಳಿಕೆಯನ್ನು ನೀಡಿದ್ದಾರೆ.
‘ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ, ಜನ ಹೆದರಿಕೆಯಲ್ಲಿ ಬದುಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವಾಗ ಬಾಂಬ್ ಸ್ಫೋಟ ಮಾಡುತ್ತಾರೆ ಎಂಬ ಭಯದಲ್ಲಿ ಎಲ್ಲರೂ ಇರುವಂತಾಗಿದೆ. ಮೋದಿ ನೋಡಲು ಉಗ್ರಗಾಮಿಯಂತೆ ಕಾಣಿಸುತ್ತಾರೆ. ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ. ದೇಶದ ಪ್ರಧಾನಿ ಈ ರೀತಿ ಇರುವುದು ಸರಿಯಲ್ಲ ಎಂದು ಹೇಳುವ ಮೂಲಕ ವಿಜಯ ಶಾಂತಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇನ್ನು ವಿಜಯ್ ಶಾಂತಿ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ವಿಜಯಶಾಂತಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
Comments are closed.