ನವದೆಹಲಿ: ವಿಂಗ್ ಕಮಾಂಡರ್ ಅಭಿನವ್ ವರ್ತಮಾನ್ ಪೈಲಟ್ ಆಗಿದ್ದ ಭಾರತೀಯ ವಾಯುಪಡೆಯ ಮಿಗ್ 21 ಯುದ್ಧ ವಿಮಾನ ಹೊಡೆದುರುಳಿಸಿದ್ದ ಪಾಕಿಸ್ತಾನ ವಾಯುಪಡೆಯ ಎಫ್-16 ಯುದ್ಧ ವಿಮಾನದ ಪೈಲಟ್ ನ್ನು ಗುರುತಿಸಿದ್ದು ಈ ಬಗ್ಗೆ ಭಾರತದ ಬಳಿ ದಾಖಲೆಗಳಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೆಹಲಿಯಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಪಾಕಿಸ್ತಾನದ ಎಫ್-16 ವಿಮಾನ ಹೊಡೆದುರುಳಿಸಿದ ಬಗ್ಗೆ ಗುರುತು, ದಾಖಲೆಗಳಿವೆಯೇ ಎಂದು ಕೇಳಿದ್ದಕ್ಕೆ ಹೌದು ನಮಗೆ ಗೊತ್ತಿದೆ ಎಂದಷ್ಟೇ ಹೇಳಿದರು.
ತಮ್ಮ ಎಫ್-16 ಯುದ್ದ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿಲ್ಲ ಎಂದು ಪಾಕಿಸ್ತಾನ ಸತತವಾಗಿ ನಿರಾಕರಿಸುತ್ತಲೇ ಬಂದಿದೆ. ಆದರೆ ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ವಾಯುಪಡೆ ಭಾರತದ ಮಿಲಿಟರಿ ವಸಾಹತುಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನದ ಎಫ್-16 ಯುದ್ಧವಿಮಾನ ದಾಳಿ ಮಾಡುತ್ತಾ ಬಂದಿದೆ ಎಂದು ಹೇಳಿವೆ.
ಭಾರತದ ಮಿಲಿಟರಿ ವಸಾಹತುಗಳ ಮೇಲೆ ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ದಾಳಿ ಮಾಡುತ್ತಾ ಬರುತ್ತಿದ್ದು ಅವುಗಳಲ್ಲಿ ಒಂದು ವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ಪೈಲಟ್ ಆಗಿದ್ದ ಮಿಗ್ -21 ವಿಮಾನ ಹೊಡೆದುರುಳಿಸಿದ ಬಗ್ಗೆ ಪ್ರತ್ಯಕ್ಷದರ್ಶಿ ಮತ್ತು ವಿದ್ಯುನ್ಮಾನ ಸಾಕ್ಷ್ಯಾಧಾರಗಳಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕಳೆದ ಫೆಬ್ರವರಿ 27ರಂದು ನಡೆದ ವಾಯುದಾಳಿಯಲ್ಲಿ ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಯುದ್ಧ ವಿಮಾನದಿಂದ ಕೆಳಗಿಳಿದಾಗ ಪಾಕಿಸ್ತಾನ ಸೇನಾಪಡೆ ಅವರನ್ನು ವಶಕ್ಕೆ ಪಡೆದಿತ್ತು. ನಂತರ ಎಲ್ಲೆಡೆಯಿಂದ ಕೇಳಿಬಂದ ತೀವ್ರ ಒತ್ತಡದ ಹಿನ್ನಲೆಯಲ್ಲಿ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.
Comments are closed.