ಕೊಚ್ಚಿನ್: ಸೋನಿಯಾ ಆಪ್ತರಾಗಿದ್ದ ಕೇರಳ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶುಕ್ರವಾರ ತಿರುವನಂತಪುರಂ ಸಂಸದ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಸಮೀಪ ಸಂಬಂಧಿಗಳೂ ಸಹ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ.
ತರೂರ್ ಅವರ ಚಿಕ್ಕಮ ಹಾಗೂ ಚಿಕ್ಕಪ್ಪ ಇಂದು ಕೊಚ್ಚಿನ್ ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತರೂರ್ ಅವರ ತಾಯಿಯ ಸೋದರಿ ಶೋಭನಾ ಶಶಿಕುಮಾರ್ ಹಾಗೂ ಅವರ ಪತಿ ಶಶಿಕುಮಾರ್ ಸೇರಿದಂತೆ ಇತರೆ 13 ಮಂದಿಯನ್ನು ಕೇರಳ ಬಿಜೆಪಿ ಅಧ್ಯಕ್ಷ ಪಿಎಸ್ ಶ್ರಿಧರನ್ ಪಿಳ್ಳೈ ಕಮಲ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಬಿಜೆಪಿ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಶೋಭನಾ ಹಾಗೂ ಶಶಿಕುಮಾರ್ ದಂಪತಿಗಳು ತಾವು ಅನೇಕ ವರ್ಷಗಳಿಂದಲೂ ಭಾರತೀಯ ಜನತಾ ಪಕ್ಷದ ಸಿದ್ಧಾಂತವನ್ನು ಅನುಸರಿಸುತ್ತಾ ಬಂದಿರುವುದಾಗಿ ಹೇಳಿದ್ದಾರೆ.
ರಾಷ್ಟ್ರೀಯ
Comments are closed.