ನವದೆಹಲಿ: ಭಾವಚಿತ್ರಕ್ಕೆ ಭಾರತ್ ಮಾತಾ ಕೀ ಜೈ ಅನ್ನೋದು ರಾಷ್ಟ್ರೀಯತೆಯಲ್ಲ. ಎಲ್ಲರಿಗಾಗಿ ಜೈ ಹೋ ಅನ್ನೋದು ದೇಶಪ್ರೇಮ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ವಿವಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ವೆಂಕಯ್ಯ ನಾಯ್ಡು ಅವರು, ಧರ್ಮ ಜಾತಿ ಹಾಗೂ ಪ್ರದೇಶದ ಆಧಾರದ ಮೇಲೆ ಬೇಧ-ಭಾವ ಮಾಡುವುದನ್ನು ನಿಲ್ಲಿಸಬೇಕೆಂದು ಸಲಹೆ ನೀಡಿದ್ದಾರೆ.
ರಾಷ್ಟ್ರೀಯತೆ ಅಂದರೆ ಭಾರತ ಮಾತಾ ಕೀ ಜೈ ಅನ್ನೋದಲ್ಲ. ಎಲ್ಲರಿಗಿಗಾಗಿ ಜೈ ಅನ್ನೋದೇ ನಿಜವಾದ ರಾಷ್ಟ್ರಪ್ರೇಮ. ಧರ್ಮ, ಜಾತಿ ಹಾಗೂ ನಗರ-ಗ್ರಾಮೀಣ ಪ್ರದೇಶದ ಆಧಾರದ ಮೇಲೆ ಜನರಲ್ಲಿ ಭೇದ-ಭಾವ ಮಾಡಿದ್ರೆ ನೀವು ಭಾರತ ಮಾತಾ ಕೀ ಜೈ ಹೇಳಬಾರದು ಎಂದಿದ್ದಾರೆ.
Comments are closed.