ರಾಷ್ಟ್ರೀಯ

ಸಾಮಾಜಿಕ ಮಾಧ್ಯಮದ ಸಂದೇಶಗಳನ್ನು ತೆರೆಯದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ

Pinterest LinkedIn Tumblr


ನವದೆಹಲಿ: ಆನ್ಲೈನ್ ವಂಚನೆಯಿಂದ ರಕ್ಷಿಸಲು, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರನ್ನು ನಿರಂತರವಾಗಿ ಎಚ್ಚರಿಸುತ್ತಿದೆ. ಡೆಬಿಟ್, ಕ್ರೆಡಿಟ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ವಂಚನೆ ತಪ್ಪಿಸಲು ಬ್ಯಾಂಕ್ ಹಲವು ಬಾರಿ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಾ ಬಂದಿದೆ.

ಆದರೆ, ಈ ಬಾರಿ ಸಾಮಾಜಿಕ ಮಾಧ್ಯಮದ ಮೂಲಕ ವಂಚನೆಯನ್ನು ತಪ್ಪಿಸಲು ಎಸ್ಬಿಐ ಒಂದು ಎಚ್ಚರಿಕೆ ನೀಡಿದೆ. Whatsapp ಅಥವಾ ಯಾವುದೇ ಇತರ ಸಾಮಾಜಿಕ ಮಾಧ್ಯಮದ ಸಂದೇಶಗಳನ್ನು ತೆರೆಯದಂತೆ ಎಸ್ಬಿಐ ಅದರ ಖಾತೆದಾರರಿಗೆ ಟ್ವೀಟ್ ಮೂಲಕ ಮನವಿ ಮಾಡಿದೆ. ಮರೆತೂ ಕೂಡ ಇಂತಹ ಸಂದೇಶಗಳನ್ನು ನೀವು ತೆರೆದಿದ್ದೇ ಆದಲ್ಲಿ, ನಿಮ್ಮ ಬ್ಯಾಂಕ್ ಖಾತೆಯು ನಿಮಿಷಗಳಲ್ಲಿ ಖಾಲಿಯಾಗುವ ಸಾಧ್ಯತೆ ಇದೇ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ತಿಳಿಸಿದೆ.

ಎಸ್ಬಿಐ ಪ್ರಕಾರ, ಹ್ಯಾಕರ್ ಗಳು WhatsApp ನಲ್ಲಿ ಸಂದೇಶ ಕಳುಹಿಸುವ ಮೂಲಕ ಗ್ರಾಹಕರಿಂದ ಬ್ಯಾಂಕಿಂಗ್ ವಿವರಗಳನ್ನು ಪಡೆಯಬಹುದು. Whatsapp ಸಂದೇಶಕ್ಕೆ ವಿನಿಮಯವಾಗಿ OTP ಯನ್ನು ಹಂಚಿಕೊಳ್ಳಬಾರದೆಂದು ಎಸ್ಬಿಐ ತನ್ನ ಗ್ರಾಹಕರಿಗೆ ಸೂಚಿಸಿದೆ.

Whatsapp ಮೂಲಕ ವಂಚನೆ ಹೇಗೆ ಸಾಧ್ಯ?
ಬ್ಯಾಂಕ್ ಹೆಸರಿನಿಂದ Whatsappನಲ್ಲಿ ಒಂದು ಸಂದೇಶವನ್ನು ನೀಡಲಾಗುತ್ತದೆ. ಗ್ರಾಹಕರಿಗೆ OTP ಗೆ ಸಂಬಂಧಿಸಿದ ಮಾಹಿತಿಯನ್ನು ಇದು ಒದಗಿಸುತ್ತದೆ. ಬಳಿಕ ನಿಮ್ಮ ನಂಬರ್ ಗೆ ಬಂದ ಒಟಿಪಿ ಹಂಚಿಕೊಳ್ಳಲು ಕೇಳಲಾಗುತ್ತದೆ. ಜೊತೆಗೆ, ನಿಮಗೆ ಅರಿವಿಲ್ಲದಂತೆಯೇ Whatsapp ಲಿಂಕ್ ಅಪ್ಲಿಕೇಶನ್ ನೊಂದಿಗೆ ಶೇರ್ ಆಗುತ್ತದೆ. ಲಿಂಕ್ ಅನ್ನು ತೆರೆಯುವ ತಪ್ಪನ್ನು ಎಂದಿಗೂ ಮಾಡಬಾರದು. ನೀವು ಲಿಂಕ್ ಅನ್ನು ತೆರೆದಾಗ, ನಿಮಗೆ ತಿಳಿಯದಂತೆ ಸ್ಪ್ಯಾಮ್ ಅಪ್ಲಿಕೇಶನ್ ಅನ್ನು ನಿಮ್ಮ ಫೋನ್ನಲ್ಲಿ ಡೌನ್ಲೋಡ್ ಮಾಡಲಾಗುತ್ತದೆ. ಈ ಸ್ಪ್ಯಾಮ್ ಅಪ್ಲಿಕೇಶನ್ನ ಸಹಾಯದಿಂದ, ಹ್ಯಾಕರ್ ಗಳು OTP ಮೂಲಕ ನಿಮ್ಮ ಖಾತೆಯನ್ನು ಸೆರೆಹಿಡಿಯಬಹುದು.

ಎಸ್ಬಿಐನಿಂದ 2FA ದೃಢೀಕರಣ ಭರವಸೆ:
ಎರಡು ಫ್ಯಾಕ್ಟರ್ ಅಥೆಂಟಿಕೇಶನ್ (2FA) ಯಶಸ್ವಿ ಮೌಲ್ಯಮಾಪನವಿಲ್ಲದೆಯೇ ಬ್ಯಾಂಕ್ ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಎಸ್ಬಿಐ ಗ್ರಾಹಕರಿಗೆ ಭರವಸೆ ನೀಡಿದೆ. ತಮ್ಮ ಕಾರ್ಡುಗಳು, ಖಾತೆಗಳು ಮತ್ತು OTP ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದೆಂದು ಬ್ಯಾಂಕ್ ಗ್ರಾಹಕರಿಗೆ ಮನವಿ ಮಾಡಿದೆ.

ವಂಚನೆಗೊಳಗಾದಾಗ ಏನು ಮಾಡಬೇಕು?
ಕಾರ್ಡಿನಿಂದ ಯಾವುದೇ ವಹಿವಾಟಿನ ಸಂದರ್ಭದಲ್ಲಿ ಯಾವುದೇ ರೀತಿಯ ವಂಚನೆ ಪ್ರಕರಣ ಕಂಡುಬಂದಲ್ಲಿ, ತಕ್ಷಣ ಬ್ಯಾಂಕಿನ 1800-11-1109 ನಂಬರ್ ಗೆ ಕರೆ ಮಾಡುವಂತೆ ಎಸ್ಬಿಐ ಹೇಳಿದೆ. ಅಂತಹ ಯಾವುದೇ ಸಂದರ್ಭದಲ್ಲಿ ಈ ಸಂಖ್ಯೆಗೆ ಕರೆ ಮಾಡಿ ಎಚ್ಚರವಹಿಸುವಂತೆ ಗ್ರಾಹಕರಿಗೆ ಬ್ಯಾಂಕ್ ಸಲಹೆ ನೀಡಿದೆ.

Comments are closed.