ಗಾಂಧಿನಗರ: ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಮಿತ್ ಶಾ ಅವರ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ನಾಮಪತ್ರ ಜೊತೆಗೆ ಸಲ್ಲಿಸಿರುವ ಅಪಿಢವಿಟ್ ನಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ.
ಅಫಿಡವಿಟ್ ಪ್ರಕಾರ 2012ರಲ್ಲಿ 11.79 ಕೋಟಿಯಷ್ಟಿದ್ದ ಅಮಿತ್ ಶಾ ದಂಪತಿಯ ಚರ ಮತ್ತು ಸ್ಥಿರ ಆಸ್ತಿ ಮೌಲ್ಯ 38. 81 ಕೋಟಿಗೆ ಏರಿಕೆಯಾಗಿದೆ. ಈ ಮಧ್ಯೆ ನಾಮಪತ್ರ ಸಲ್ಲಿಸುವಾಗ ಅಮಿತ್ ಶಾ ಕೈಯಲ್ಲಿ 20, 663 ರೂ. ನಗದು ಇದ್ದರೆ, ಅವರ ಪತ್ನಿ ಬಳಿ 72, 578 ರೂ. ಇತ್ತೆಂದು ಹೇಳಿದ್ದಾರೆ.
ಅಫಿಡವಿಟ್ ಪ್ರಕಾರ , ಶಾ ಹಾಗೂ ಅವರ ಪತ್ನಿ ವಿವಿಧ ಬ್ಯಾಂಕು ಖಾತೆಗಳಲ್ಲಿ 27. 84 ಲಕ್ಷ ರೂ ಇದ್ದು, 9.80 ಲಕ್ಷ ರೂ. ಭದ್ರತಾ ಠೇವಣಿ ಇಡಲಾಗಿದೆ. ಇತ್ತೀಚಿನ ಆದಾಯ ತೆರಿಗೆ ರಿಟರ್ನ್ಸ್ ಪ್ರಕಾರ 2. 84 ಕೋಟಿ ಸಂಚಿತ ಆದಾಯ ಹೊಂದಿರುವುದಾಗಿ ತಿಳಿಸಿದ್ದಾರೆ.
ರಾಜ್ಯಸಭಾ ಸಂಸದರಾಗಿ ಪಡೆದಿರುವ ವೇತನ, ಆಸ್ತಿ ಮೇಲಿನ ಬಾಡಿಗೆ, ಹಾಗೂ ಕೃಷಿ ಚಟುವಟಿಕೆಗಳಿಂದ ಆದಾಯ ಪಡೆದುಕೊಳ್ಳುತ್ತಿರುವುದಾಗಿ ಅಮಿತ್ ಶಾ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
2017ರಲ್ಲಿ ಗುಜರಾತಿನಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಅಮಿತ್ ಶಾ, 34. 31 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. 2017 ರಿಂದ ಅವರ ಆಸ್ತಿಯಲ್ಲಿ 4. 5 ಕೋಟಿ ಮೌಲ್ಯ ಹೆಚ್ಚಳವಾಗಿದೆ.
2012ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಟ್ಟು 11.79 ಕೋಟಿ ಮೌಲ್ಯದ ಚರಾ ಹಾಗೂ ಸ್ಥಿರಾ ಆಸ್ತಿ ಹೊಂದಿರುವುದಾಗಿ ಅಮಿತ್ ಶಾ ಘೋಷಿಸಿಕೊಂಡಿದ್ದರು.
Comments are closed.