ರಾಷ್ಟ್ರೀಯ

ಐ ಲವ್ ಮೋದಿ ಎಂದ ರಾಹುಲ್ ಗಾಂಧಿ!

Pinterest LinkedIn Tumblr


ಪುಣೆ: ನಾನು ಮೋದಿಯನ್ನೂ ಪ್ರೀತಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪುಣೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳ ಜತೆ ಮಾತನಾಡುತ್ತಿದ್ದ ಅವರು, ಪ್ರಾಮಾಣಿಕವಾಗಿ ನಾನು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಅವರ ವಿರುದ್ಧ ಯಾವುದೇ ರೀತಿಯ ದ್ವೇಷ ಭಾವ ನನಗಿಲ್ಲ . ಆದರೆ ಅವರಿಗೆ ನನ್ನ ಮೇಲೆ ಅಂತಹ ಪ್ರೀತಿಯ ಭಾವವಿಲ್ಲ, ಬದಲಾಗಿ ಕೋಪವಿದೆ ಎಂದು ಹೇಳಿದ್ದಾರೆ.

ಸಂವಾದದಲ್ಲೂ ಮೋದಿ ಮೋದಿ ಎಂಬ ಕೂಗು ಕೇಳಿ ಬಂತು. ಈ ವೇಳೆ ಇದನ್ನು ಸ್ಟೋರ್ಟಿವ್ ಆಗೆ ತೆಗೆದುಕೊಂಡ ರಾಹುಲ್, ಮೋದಿ ಅವರ ಮೇಲೆ ಯಾವುದೆ ದ್ವೇಷವಿಲ್ಲ. ದೇಶದ ಬೆಳವಣಿಗೆಗೆ ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಕೇಳಿಕೊಂಡರು.

ನಾನು ಮತ್ತು ತಂಗಿ ಪ್ರಿಯಾಂಕಾ ಉತ್ತಮ ಸ್ನೇಹಿತರು.. ನಮ್ಮ ಕುಟುಂಬವನ್ನು ಹಿಂಸಾಚಾರ ಕಾಡಿತ್ತು ಎಂದು ಹೇಳಿದ್ದಲ್ಲದೆ ರಾಜಕಾರಣಿಗಳು 60 ವರ್ಷಕ್ಕೆ ನಿವೃತ್ತಿ ತೆಗೆದುಕೊಳ್ಳಬಹುದು ಎಂಬಸಲಹೆಯನ್ನು ನೀಡಿದರು.

Comments are closed.