ರಾಷ್ಟ್ರೀಯ

ಪಾಕ್​ನ ಎಫ್​-16 ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ನಮ್ಮ ಹತ್ತಿರ ಸಾಕ್ಷ್ಯಗಳಿವೆ: ಭಾರತ ವಾಯುಪಡೆ

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ಎಫ್​-16 ಯುದ್ಧವಿಮಾನವನ್ನು ಫೆಬ್ರವರಿ 27ರಂದು ಭಾರತದ ವಾಯುಪಡೆ ಹೊಡೆದುರುಳಿಸಿದ್ದಕ್ಕೆ ನಮ್ಮ ಬಳಿ ನಿರಾಕರಿಸಲಾಗದ ಸಾಕ್ಷ್ಯಗಳಿವೆ ಎಂದು ಭಾರತ ವಾಯುಪಡೆ ಸೋಮವಾರ ಹೇಳಿದೆ.

ಮೂಲಗಳ ಖಚಿತಪಡಿಸಿರುವ ಪ್ರಕಾರ, ಪಾಕಿಸ್ತಾನದ ಎಫ್​-16 ಯುದ್ಧ ವಿಮಾನವನ್ನು ವಿಂಗ್​ ಕಮಾಂಡರ್ ಅಭಿನಂದನ್ ವರ್ತಮಾನ್​ ಅವರು ಹೊಡೆದುರುಳಿಸಿದ್ದಾರೆ. ಇದಕ್ಕೆ ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳಿವೆ ಎನ್ನಲಾಗಿದೆ.

ಫೆಬ್ರವರಿ 27ರಂದು ಎಂಟತ್ತು ಕಿ.ಮೀ. ಅಂತರದಲ್ಲಿ ಎರಡು ಯುದ್ಧವಿಮಾನಗಳು ಪತನವಾಗಿವೆ. ಅದರಲ್ಲಿ ಒಂದು ವಿಮಾನದ ಭಾರತ ವಾಯುಸೇನೆಯ ಮಿಗ್​-21 ಮತ್ತು ಮತ್ತೊಂದು ಪಾಕಿಸ್ತಾನ ವಾಯುಸೇನೆಯ ವಿಮಾನ ಎಂದು ಭಾರತ ವಾಯುಪಡೆ ಹೇಳಿದೆ.

ಇತ್ತೀಚೆಗೆ ಅಮೆರಿಕ ನಿಯತಕಾಲಿಕೆಯೊಂದು ಪಾಕಿಸ್ತಾನದಲ್ಲಿ ಯಾವೊಂದು ಎಫ್​-16 ಯುದ್ಧ ವಿಮಾನಗಳು ಕಾಣೆಯಾಗಿಲ್ಲ ಎಂದು ವರದಿ ಮಾಡಿತ್ತು.

Comments are closed.