ತಿರುವನಂತಪುರಂ: ತಿರುವನಂತಪುರಂ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ತಾವು ಸ್ಥಳೀಯ ದೇವಾಲಯದಲ್ಲಿ ಧಾರ್ಮಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಗಾಯಗೊಂಡಿದ್ದಾರೆ. ಅವರ ತೆಲೆಗೆ ಎಂಟು ಕಡೆ ಹೊಲಿಗೆ ಹಾಕಲಾಗಿದೆ.
ಸಾಂಪ್ರದಾಯಿಕ ಹೊಸ ವರ್ಷಾಚರಣೆ ಹಬ್ಬವಾಗಿರುವ ವಿಷು ಸಂಭ್ರಮದ ಕಾರಣ ಶಶಿ ತರೂರ್ ಪ್ರಸಿದ್ದ ಗಾಂಧಾರಿ ಅಮ್ಮ ನ್ ದೇವಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ಅವರು ತುಲಾಭಾರ ಸೇವೆ ನೆರವೇರಿಸಲು ಮುಂದಾದಾಗ ತುಲಾಭಾರಕ್ಕಾಗಿ ಹಾಕಲಾಗಿದ್ದ ತಕ್ಕಡಿಯ ಕಬ್ಬಿಣದ ಸರಪಣಿಗಳು ತುಂಡಾಗಿ ಅವರ ತಲೆ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ರಾಜ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಧ್ಯ ತರೂರ್ ಅವರ ತಲೆಗೆ ಎಂಟು ಹೊಲಿಗೆಗಳನ್ನು ಹಾಕಲಾಗಿದ್ದು ಕಾಂಗ್ರೆಸ್ ಮುಖಂಡರ ಆರೋಗ್ಯ ಸ್ಥಿತಿ ಕುರಿತಂತೆ ವೈದ್ಯರು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತರೂರ್ ಬಿಜೆಪಿಯಿಂದ ಮಿಜೋರಾಂ ಮಾಜಿ ರಾಜ್ಯಪಾಲ ಕೆ. ರಾಜಶೇಕರನ್ ಹಾಗೂ ಸಿಪಿಐ ನಿಂದ ಸಿ.ವಿ. ದಿವಾಕರನ್ ಅವರನ್ನು ಎದುರಿಸಬೇಕಿದೆ.
Comments are closed.