ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಬಾಂಗ್ಲಾ ದೇಶದ ಖ್ಯಾತ ನಟ ಫಿರ್ದೋಸ್ ಅಹಮದ್ ಪ್ರಚಾರ ನಡೆಸಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ವರದಿ ನೀಡುವಂತೆ ಸೂಚಿಸಿದೆ.
ರಾಯ್ಗಂಜ್ ಲೋಕಸಭೆ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾಲಾಲ್ ಅಗರ್ವಾಲ್ ಪರ ಬಾಂಗ್ಲಾ ನಟ ಫಿದ್ಯಸ್ ಅಹಮದ್, ಬೆಂಗಾಳಿ ನಟರಾದ ಅಂಕುಶ್ ಮತ್ತು ಪಾಯಲ್ ಭಾನುವಾರ ಪ್ರಚಾರದಲ್ಲಿ ಭಾಗವಹಿಸಿದ್ದರು. ಇವರು ಪ್ರಚಾರ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿಎಂಸಿ ಅಭ್ಯರ್ಥಿ ಪರ ಬಾಂಗ್ಲಾ ನಟ ಪ್ರಚಾರ ನಡೆಸಿದ ಕುರಿತು ಬಿಜೆಪಿ ನಾಯಕರಾದ ಜಯ್ ಪ್ರಕಾಶ್ ಮುಜಮ್ದಾರ್ ಮತ್ತು ಸಿಸಿರ್ ಬಜೋರಿಯಾ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಜುಮ್ದಾರ್ ಅವರು ಇದು ಕಾನೂನು ಬಾಹಿರ ಕ್ರಮವಾಗಿದ್ದು, ಟಿಎಂಸಿಯ ಸಿದ್ಧಾಂತದ ಕುರಿತು ಸಾಕ್ಷ್ಯ ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಕುರಿತು ಕೇಂದ್ರ ಗೃಹ ಸಚಿವಾಲಯ ವಿದೇಶಿಯರ ಪ್ರಾದೇಶಿಕ ನೋಂದಣೆ ಕಚೇರಿಗೆ ವರದಿ ನೀಡುವಂತೆ ಸೂಚಿಸಿದೆ.
Comments are closed.