ನವದೆಹಲಿ: ಮಾಜಿ ಯುಪಿ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಎನ್.ಡಿ ತಿವಾರಿಯ ಪುತ್ರ ರೋಹಿತ್ ಶೇಖರ್ ತಿವಾರಿ ಅವರು ಮಂಗಳವಾರದಂದು ಸಾಕೇತ್ ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ರೋಹಿತ್ ಮೃತಪಟ್ಟಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನು ದಕ್ಷಿಣ ದೆಹಲಿಯ ಡಿಸಿಪಿ ವಿಜಯ್ ಕುಮಾರ್ ದೃಢಪಡಿಸಿದ್ದಾರೆ ಆದರೆ ಇನ್ನು ಕೂಡ ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ.
ರೋಹಿತ್ ಶೇಖರ್ ಅವರು ಎನ್ಡಿ ತಿವಾರಿ ಮತ್ತು ಉಜ್ವಾಲಾ ಶರ್ಮಾ ಅವರ ಜೈವಿಕ ಪುತ್ರನಾಗಿದ್ದಾರೆ. ಜನವರಿ 2017 ರಲ್ಲಿ ರೋಹಿತ್ ಶೇಖರ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರಿಕೊಂಡರು.
Comments are closed.