ರಾಷ್ಟ್ರೀಯ

ನಾಟಕದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸಿದ ಲಿಪ್ ಲಾಕ್ ಕಿಸ್ ..! ಮುಂದೆ ಏನಾಯಿತು …!

Pinterest LinkedIn Tumblr

ಭೋಪಾಲ್ : ನಾಟಕದಲ್ಲಿ ಲಿಪ್ ಲಾಕ್ ಮಾಡುವ ದೃಶ್ಯ ಇರಲೇ ಇಲ್ಲ. ಆದರೆ ಈ ಜೋಡಿಗೆ ಅದೇನಾಯಿತೋ ಗೊತ್ತಿಲ್ಲ. ವೇದಿಕೆ ಮೇಲೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಅವರಿಗೇ ಏನಾಯಿತೋ ಗೊತ್ತಿಲ್ಲ.. ಆದರೆ ನಾಟಕ ಮಾತ್ರ ಹಾದಿ ತಪ್ಪಿ ಹೋಯಿತು.

ಭೋಪಾಲ್ ನ ರವೀಂದ್ರ ರಂಗಮಂದಿರದ ರೋಮಿಯೋ-ಜೂಲಿಯಟ್ ನಾಟಕದ ದೃಶ್ಯದ ವೇಳೆ ಲಿಪ್ ಲಾಕ್ ಆಗಿ ಹೋಗಿದೆ. ನಿಶಾಂತ್ ರಘವಂಶಿ ರೋಮಿಯೋ ಪಾತ್ರವನ್ನು, ಮೃಣಾಲಿ ಪಾಂಡೆ ಜೂಲಿಯಟ್ ಪಾತ್ರ ನಿರ್ವಹಣೆ ಮಾಡುತ್ತಿದ್ದರು.

ಜೂಲಿಯಟ್ ವಿಷ ಸೇವಿಸಿ ಸಾಯುವ ನಾಟಕ ಮಾಡುತ್ತಾಳೆ. ಆದರೆ ರೋಮಿಯೋ ನಿಜವಾಗಿಯೂ ಜೂಲಿಯಟ್ ಮೃತಪಟ್ಟಿದ್ದಾಳೆ ಎಂದು ದುಃಖಿತನಾಗಿ ತಾನೂ ಸಾಯಲು ಮುಂದಾಗುತ್ತಾನೆ. ಈ ವೇಳೆ ರೋಮಿಯೋ ಪಾತ್ರಧಾರಿ ನಿಶಾಂತ್ ರಘವಂಶಿ ವೇದಿಕೆ ಮೇಲೆಯೇ ಜೂಲಿಯಟ್ ಪಾತ್ರಧಾರಿ ಮೃಣಾಲಿ ಪಾಂಡೆಗೆ ಕಿಸ್ ಕೊಟ್ಟಿದ್ದಾನೆ. ಇತ್ತ ಸಾಯುವಂತೆ ನಟಿಸಿದ್ದ ಜೂಲಿಯಟ್ ಎದ್ದು ಆಕೆಯೂ ನಿಶಾಂತ್ ರಘವಂಶಿಗೆ ಲಿಪ್‍ಲಾಕ್ ಕಿಸ್ ಮಾಡಿದ್ದಾಳೆ. ಈ ಎಲ್ಲ ಅವಘಡ ನಡೆಯುತ್ತಿದ್ದಂತೆ ಪ್ರೇಕ್ಷಕರು ಗಲಾಟೆ ಆರಂಭಿಸಿದ್ದಾರೆ.

ಒಟ್ಟಿನಲ್ಲಿ ಒಂದು ಲಿಪ್ ಲಾಕ್ ದೃಶ್ಯ ಇಡಿ ನಾಟಕವನ್ನೇ ಕುಲಗೆಡಿಸಿದ್ದು ಸುಳ್ಳಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಹ ತಕ್ಕ ರೀತಿಯಲ್ಲಿ ಪ್ರತಿಕ್ರಿಯೆ ಎದುರಾಗಿದೆ.

Comments are closed.