ರಾಷ್ಟ್ರೀಯ

ರಾಹುಲ್ ಗಾಂಧಿ ಜನಿಸಿದಾಗ ಪ್ರಥಮ ಸಲ ಎತ್ತಿಕೊಂಡಿದ್ದೇ ನಾನು ಎಂದ ನಿವೃತ್ತ ನರ್ಸ್!

Pinterest LinkedIn Tumblr


ಕೊಚ್ಚಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ದೂರು ಸಲ್ಲಿಸಿರುವ ಬೆನ್ನಲ್ಲೇ ಕೇರಳದ ನಿವೃತ್ತ ನರ್ಸ್ ಒಬ್ಬರು ಆಶ್ಚರ್ಯಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್ ಹುಟ್ಟಿದಾಗ ಮಗುವನ್ನು ಮೊದಲು ಎತ್ತಿಕೊಂಡಿದ್ದೇ ನಾನು. ಅಲ್ಲಿ ನಾನಾಗ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ. ಆಗಿನ್ನೂ ನನಗೆ 23 ವರ್ಷ ವಯಸ್ಸು” ಎಂದು ಕೇರಳದ ವಯನಾಡಿನ 72 ವರ್ಷದ ವೃದ್ಧೆ ರಾಜಮ್ಮ ಹೇಳಿದ್ದಾರೆ.

“ನನಗಿನ್ನೂ ನೆನಪಿದೆ. ಆಗ ನನಗಿನ್ನೂ 23 ವರ್ಷ. ರಾಹುಲ್ ಗಾಂಧಿ ಅಪ್ಪ ರಾಜೀವ್ ಗಾಂಧಿ ಹಾಗೂ ಚಿಕ್ಕಪ್ಪ ಸಂಜಯ್ ಗಾಂಧಿ ಹೆರಿಗೆ ಕೋಣೆ ಹೊರಗೆ ಕಾಯುತ್ತಾ ನಿಂತಿದ್ದರು. ಸೋನಿಯಾ ಗಾಂಧಿಯವರನ್ನ ಹೆರಿಗೆ ಕೊಠಡಿಗೆ ಕರೆದೊಯ್ಯಲಾಗಿತ್ತು. ರಾಹುಲ್ ಹುಟ್ಟಿದ ನಂತರ ಮೊದಲುಎತ್ತಿಕೊಂಡಿದ್ದೇ ನಾನು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಮೊಮ್ಮಗನನ್ನು ಎತ್ತಿಕೊಳ್ಳೋಕೇ ನಾವೆಲ್ಲರೂ ಕಾತುರರಾಗಿದ್ದೆವು. ರಾಹುಲ್ ಅಂತೂ ತುಂಬಾ ಮುದ್ದಾಗಿದ್ದ” ಎಂದಿದ್ದಾರೆ.

49 ವರ್ಷಗಳ ನಂತರ ಮುದ್ದಾದ ಮಗು ಇದೀಗ ಕಾಂಗ್ರೆಸ್‌ ಅಧ್ಯಕ್ಷನಾಗಿ ಮತ್ತು ವಯನಾಡಿನಿಂದ ಸ್ಪರ್ಧಿಸುತ್ತಿದೆ. ಈಗ ದಿನಗಳಲ್ಲಿ ನಾನು ಗೃಹಿಣಿಯಾಗಿದ್ದೇನೆ. ಆದರೆ ಈಗ ನಾನು ಖುಷಿಯಾಗಿಲ್ಲ ಎಂದ ರಾಜಮ್ಮ ಅವರು, ರಾಹುಲ್ ಗಾಂಧಿ ಭಾರತೀಯ ಪೌರತ್ವ ಕುರಿತು ಸುಬ್ರಹ್ಮಣಿಯನ್ ಆರೋಪವನ್ನು ಅಲ್ಲಗಳೆದಿದ್ದಾರೆ. ರಾಹುಲ್ ಭಾರತದಲ್ಲಿ ಜನಿಸಿರುವುದಕ್ಕೆ ಬೇಕಾದ ಎಲ್ಲಾ ದಾಖಲೆಗಳೂ ದೆಹಲಿಯಲ್ಲಿದೆ. ಇದನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸದ್ಯ ಕೇರಳದ ಸುಲ್ತಾನ್ ಬಥೇರಿ ಬಳಿಯ ಕಲ್ಲೂರಿನಲ್ಲಿ ವಾಸವಿರುವ ರಾಜಮ್ಮ, ರಾಹುಲ್ ಗಾಂಧಿಯನ್ನು ಒಮ್ಮೆ ಭೇಟಿಯಾಗುವ ಆಸೆಯಿದೆ ಎಂದಿದ್ದಾರೆ.

Comments are closed.