ನವದೆಹಲಿ: ಲೋಕಸಭಾ ಚುನಾವಣೆ ಮುಕ್ತಾಯಕ್ಕೆ ಇನ್ನೂ ಎರಡು ವಾರಗಳು ಬಾಕಿ ಇರುವಂತೆಯೇ ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಮೈತ್ರಿ ಪಕ್ಷಗಳ ಅಗತ್ಯವಿದೆ ಎಂದು ಆಡಳಿತಾರೂಢ ಪಕ್ಷದ ಹಿರಿಯ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ.
543 ಸ್ಥಾನಗಳ ಪೈಕಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನುಮಾನ ವ್ಯಕ್ತಪಡಿಸಿದ್ದು, ಸರ್ಕಾರ ರಚನೆಗೆ ಮೈತ್ರಿ ಪಕ್ಷಗಳ ಬೆಂಬಲ ಅಗತ್ಯ ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡಾ ಇದೇ ಹೇಳಿಕೆಯನ್ನು ನೀಡಿದ್ದಾರೆ.
ಒಂದು ವೇಳೆ 271 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ನಾವು ಸಂತೋಷವಾಗಿರುತ್ತೇವೆ. ಎನ್ ಡಿಎ ಸ್ಪಷ್ಟ ಬಹುಮತ ಹೊಂದಲಿದೆ ಎಂದು ರಾಮ್ ಮಾಧವ್ ಬ್ಲೂಮ್ ಬರ್ಜ್ ಸುದ್ದಿ ಸಂಪಾದಕ ಜಾನ್ ಮೈಕೆಲ್ ಲೆಥ್ ವೈಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
2014ರಲ್ಲಿ ಉತ್ತರ ಭಾರತ, ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಉತ್ತಮ ಸಾಧನೆ ಮಾಡಿದ್ದ ಬಿಜೆಪಿ ಈ ಬಾರಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಗತಿ ಪರ ನೀತಿಗೆ ಆದ್ಯತೆ ನೀಡಲಾಗುವುದು,. ಆರ್ಥಿಕ ಸುಧಾರಣೆಗಳ ಮೇಲೆ ಗಮನಹರಿಸುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶವಾಗುವುದಿಲ್ಲ ಎಂದಿದ್ದಾರೆ.
ಈಶಾನ್ಯ ಭಾರತದಲ್ಲಿ ಬಿಜೆಪಿಯ ಪ್ರಾಬಲ್ಯ ವಿಸ್ತರಣೆಯಾಗಿದೆ. ದಕ್ಷಿಣ ಭಾರತದಲ್ಲೂ ಇದೇ ರೀತಿಯ ಪ್ರಯತ್ನ ಮಾಡಲಾಗಿದೆ. ರಾಜಕಾರಣಿಯಾಗಿ ಹೇಳುವುದಾದರೆ ಆಡಳಿತಾ ವಿರೋಧಿ ಅಲೆಯಿಂದಾಗಿ ಕಳೆದ ಬಾರಿ ಮಾಡಿದ ಸಾಧನೆಯನ್ನು ಈ ಬಾರಿ ಮಾಡಲು ಸಾಧ್ಯತೆ ಇಲ್ಲ ಎಂದು ರಾಮ್ ಮಾಧವ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಉಂಟಾಗಿದ್ದ ಪ್ರಕ್ಷಬ್ದು ವಾತಾವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಜೊತೆಗೆ ಉತ್ತಮ ವಿದೇಶಾಂಗ ನೀತಿ ಅನುಸರಿಸಿದ್ದಾರೆ.ಇತ್ತೀಚಿಗೆ ಜೈಷ್ – ಇ- ಮೊಹಮ್ಮದ್ ಸಂಘಟನೆ ಉಗ್ರ ಮಸೂದ್ ಅಝರ್ ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ.ಚುನಾವಣೆ ಮುಗಿದ ನಂತರ ಶಾಂಘೈ ಶೃಂಗಸಭೆಯಲ್ಲಿ ಇಮ್ರಾನ್ ಖಾನ್ ಹಾಗೂ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ಮಾಧವ್ ತಿಳಿಸಿದರು.
Comments are closed.