ರಾಷ್ಟ್ರೀಯ

‘ಜೈ ಶ್ರೀರಾಮ್’ ಮಂತ್ರ ಪಠಿಸುತ್ತೇನೆ, ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ’: ಮಮತಾಗೆ ಸವಾಲೆಸೆದ ಪ್ರಧಾನಿ ಮೋದಿ

Pinterest LinkedIn Tumblr

ಝರ್‌ಗ್ರಾಮ್‌: ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಕ್ಕಾಗಿ ಮೂವರನ್ನು ಬಂಧಿಸಿದ ಪಶ್ಚಿಮ ಬಂಗಾಳ ಮುಕ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದರು. ‘ನಾನೂ ‘ಜೈ ಶ್ರೀರಾಮ್’ ಮಂತ್ರ ಪಠಿಸುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ’ ಎಂದು ಪ್ರಧಾನಿ ಮೋದಿ ಸವಾಲೆಸೆದರು.

ಘಾತಲ್ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ ತಮ್ಮ ವಾಹನಕ್ಕೆ ಅಡ್ಡ ಬಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಮೂವರನ್ನು ತಕ್ಷಣ ಬಂಧಿಸುವಂತೆ ಮಮತಾ ಬ್ಯಾನರ್ಜಿ ಆದೇಶಿಸಿದ್ದರು. ಜೈ ಶ್ರೀರಾಮ್ ಘೋಷಣೆ ಕೇಳುತ್ತಲೇ ಕೆರಳಿದ ಮಮತಾ ಬ್ಯಾನರ್ಜಿ ಭುಸುಗುಡುತ್ತ ಬಂಧನ ಆದೇಶ ಹೊರಡಿಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

‘ಜೈ ಶ್ರೀರಾಮ್’ ಮಂತ್ರ ಪಠಿಸಿದವರನ್ನು ದೀದಿ ಜೈಲಿಗೆ ತಳ್ಳುವ ಧಾರ್ಷ್ಟ್ಯ ಪ್ರದರ್ಶಿಸಿದ್ದಾರೆ. ಈಗ ನಾನೂ ಜೈ ಶ್ರೀರಾಮ್ ಮಂತ್ರ ಪಠಿಸುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನನ್ನು ಜೈಲಿಗೆ ತಳ್ಳಿ. ಆ ಮೂಲಕವಾದರೂ ಪಶ್ಚಿಮ ಬಂಗಾಳದ ಜನತೆಯನ್ನು ಟಿಎಂಸಿಯ ದುರಾಡಳಿತದಿಂದ ಪಾರು ರಕ್ಷಿಸಲು ಸಾಧ್ಯವೋ ನೋಡೋಣ’ ಎಂದು ಮೋದಿ ಸವಾಲೆಸೆದರು.

ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ರಾಮಾಯಣ ಮತ್ತು ಮಹಾಭಾರತದ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದರು.

‘ಹಿಂದೂ ಧರ್ಮದ ವಿರುದ್ಧ, ಹಿಂದೂಗಳ ಪವಿತ್ರ ಗ್ರಂಥಗಳ ವಿರುದ್ಧ ಅವಹೇಳನ ಮಾಡುವುದು ಕಮ್ಯೂನಿಸ್ಟರಿಗೆ ಫ್ಯಾಷನ್ ಆಗಿಬಿಟ್ಟಿದೆ’ ಎಂದು ಪ್ರಧಾನಿ ಮೋದಿ ಟೀಕಿಸಿದರು.

ರಾಮಾಯಣ ಮತ್ತು ಮಹಾಭಾರತ ಪೌರಾಣಿಕ ಗ್ರಂಥಗಳು ಹಿಂದೂ ಹಿಂಸಾಚಾರಕ್ಕೆ ಸಾಕ್ಷಿಗಳು ಎಂದು ಸೀತಾರಾಂ ಯೆಚೂರಿ ಬಣ್ಣಿಸಿದ್ದರು.

‘ರಾಮಾಯಣ ಮತ್ತು ಮಹಾಭಾರತಗಳಲ್ಲಿ ಹಿಂಸಾಚಾರದ ಘಟನೆಗಳೇ ತುಂಬಿವೆ’ ಎಂದು ಯೆಚೂರಿ ಹೇಳಿದ್ದರು.

ಮಮತಾ ಬ್ಯಾನರ್ಜಿ ವಿರುದ್ಧವೂ ಹರಿಹಾಯ್ದ ಪ್ರಧಾನಿ, ‘ದೀದಿ ತಮ್ಮ ಮಹಾಮಿಲಾವಟಿ ಗ್ಯಾಂಗ್ ನೆರವಿನೊಂದಿಗೆ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದಾರೆ. ಅವರ ಕನಸು ಈಗಾಗಲೇ ಒಡೆದ ಗುಳ್ಳೆಯಂತಾಗಿದೆ. ಬಂಗಾಳದಲ್ಲಿ 10 ಸ್ಥಾನಗಳನ್ನೂ ಗೆಲ್ಲಲು ಮಮತಾಗೆ ಸಾಧ್ಯವಿಲ್ಲ’ ಎಂದು ಪ್ರಧಾನಿ ಹೇಳಿದರು.

Comments are closed.