ರಾಷ್ಟ್ರೀಯ

ವಿಷ ಕುಡಿದಿದ್ದ ಮಹಿಳೆಗೆ ಚಿಕಿತ್ಸೆ ನೀಡುವಾಗ ಬಾಯೊಳಗೆ ಸ್ಫೋಟ; ಮಹಿಳೆ ಸಾವು: ವೈದ್ಯರು ಶಾಕ್‌

Pinterest LinkedIn Tumblr

ಅಲಿಗಢ: ಉತ್ತರ ಪ್ರದೇಶದ ಅಲಿಗಢದ ಜವಾಹರಲಾಲ್‌ ಮೆಡಿಕಲ್‌ ಕಾಲೇಜು ವೈದ್ಯರು ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡುವಾಗ ಶಾಕ್‌ಗೊಳಗಾಗಿದ್ದಾರೆ. ಯಾಕೆಂದರೆ, ವಿಷ ಕುಡಿದಿದ್ದ ಮಹಿಳೆಗೆ ಚಿಕಿತ್ಸೆ ನೀಡುವಾಗ ಸ್ಫೋಟ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡಿದೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ವಿಷ ಕುಡಿದಿದ್ದ ಮಹಿಳೆಗೆ ಚಿಕಿತ್ಸೆ ನೀಡುವಾಗ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ನೋಡಿದ ವೈದ್ಯರು ಚಿಕಿತ್ಸೆ ನಿಲ್ಲಿಸಿದ್ದು, ಬಳಿಕ ಚಿಕಿತ್ಸೆಗೊಳಗಾಗಿದ್ದ ವೇಳೆ ಮಹಿಳೆ ಮೃತಪಟ್ಟಿದ್ದಾರೆ. ಈ ವಿಚಿತ್ರ ಘಟನೆ ಬಗ್ಗೆ ಅಧ್ಯಯನ ಮಾಡಲು ಮೆಡಿಕಲ್‌ ಕಾಲೇಜಿನ ವೈದ್ಯರು ಪ್ಲಾನ್‌ ಮಾಡುತ್ತಿದ್ದಾರೆ.

ಮೊಹಲ್ಲಾ ನಾಸೀರ್ ನಿವಾಸಿ ಶೀಲಾ ಎಂಬ ಮಹಿಳೆ ತನ್ನ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಆಕೆ ಆಲಮ್‌ಪುರ ಸುಬ್ಕಾರಾ ಗ್ರಾಮವನ್ನು ತಲುಪಿದ ಬಳಿಕ ಸಂಬಂಧಿಕರನ್ನು ಕರೆದಿದ್ದು, ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರನ್ನು ಕರೆದಿದ್ದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆ ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದು, ನಂತರ ಚಿಕಿತ್ಸೆಯನ್ನು ಆರಂಭಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ಮೆಡಿಕಲ್‌ ಕಾಲೇಜು ಎಮರ್ಜೆನ್ಸಿ ವಾರ್ಡ್‌ನ ಎಸಿಎಂಒ ರಾಹುಲ್‌ ಕುಮಾರ್, ”ಮಹಿಳೆಯ ದೇಹದಿಂದ ವಿಷ ತೆಗೆಯಲು ಆಕೆಯ ಹೊಟ್ಟೆಯೊಳಗೆ ಪೈಪ್‌ ಅಳವಡಿಸಲಾಗಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಶೀಲಾ ಬಾಯೊಳಗೆ ಸ್ಫೋಟ ಸಂಭವಿಸಿದ್ದು, ಬೆಂಕಿ ಬಂದಿದ್ದಲ್ಲದೆ ಹೊಗೆಯಾಡಿದೆ. ಬೆಂಕಿಯಿಂದ ಮಹಿಳೆ ಸುಟ್ಟುಹೋಗದಿದ್ದರೂ ಆಕೆ ನಂತರ ಮೃತಪಟ್ಟರು” ಎಂದು ತಿಳಿಸಿದ್ದಾರೆ.

Comments are closed.