ರಾಷ್ಟ್ರೀಯ

ಮಾಂತ್ರಿಕನೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದ ಪತ್ನಿಯನ್ನು ನದಿಗೆ ದೂಡಿ ಹಾಕಿದ ಪತಿ !

Pinterest LinkedIn Tumblr

ಅಲಿಗಢ: ಮಾಂತ್ರಿಕನೊಂದಿಗೆ ಮಲಗುವುದಕ್ಕೆ ನಿರಾಕರಿಸಿದ ಪತ್ನಿಯನ್ನು ಪತಿಯೇ ನದಿಗೆ ತಳ್ಳಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.

ಉತ್ತರಪ್ರದೇಶದ ಅಲಿಗಢದಲ್ಲಿ ಪತ್ನಿಯನ್ನು ಮಾಂತ್ರಿಕನ ಜೊತೆ ಮಲಗುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ್ದರಿಂದ ಆಕೆಯನ್ನು ಪತಿ ಮಾನ್ಪಾಲ್ ಹಾಗೂ ಮಂತ್ರವಾದಿ ಸಂತಾದಾಸ್ ದುರ್ಗಾದಾಸ್ ನದಿಗೆ ತಳ್ಳಿದ್ದಾರೆ.

ಈ ಸಂಬಂಧ ಮಾನ್ಪಾಲ್ ಪತ್ನಿಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ಪೊಲೀಸರು ಮಾನ್ಪಾಲ್ ಮತ್ತು ಸಂತಾದಾಸ್ ನನ್ನು ಬಂಧಿಸಿದ್ದಾರೆ.

Comments are closed.