ಪಣಜಿ: ಲಾಂಗ್ ಡ್ರೈವ್ ಎಂದು ನೆಪ ಹೇಳಿ ಸ್ನೇಹಿತೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ದಕ್ಷಿಣ ಗೋವಾ ಜಿಲ್ಲೆಯ ಕರ್ರೂಮ್ ಗ್ರಾಮದವರಾಗಿದ್ದು, ಗೌತಮ್ ರಾಯ್ಕರ್(25) ಮತ್ತು ಸರ್ವೇಶ್ ಕೌಥಾಂಕರ್(24) ಬಂಧಿತರು. 40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಸುದೇಶ್ ನಾಯ್ಕ್ ತಿಳಿಸಿದ್ದಾರೆ.
ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯು ಪಣಜಿಗೆ ಬುಧವಾರ ರಾತ್ರಿ ಲಾಂಗ್ ಡ್ರೈವ್ ನೆಪದಲ್ಲಿ ಬಂದಿದ್ದರು. ಈ ವೇಳೆ ಬೀಚ್ ಸಮೀಪ ಕಾರಿನೊಳಗೆ ಇಬ್ಬರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಬಳಿಕ ಆಕೆಯನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದರು. ಗಾಯಗೊಂಡಿದ್ದ ಮಹಿಳೆಯು ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376, 325ರ ಅತ್ಯಾಚಾರ, ಹಿಂಸೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.