ರಾಷ್ಟ್ರೀಯ

ರಾಷ್ಟ್ರಪತಿ ಭಾಷಣ ಮಾಡುತ್ತಿದ್ದಾಗ ರಾಹುಲ್​ ಮೊಬೈಲ್​​ನಲ್ಲಿ ಬ್ಯುಸಿ!

Pinterest LinkedIn Tumblr

ಸದಾಕಾಲ ಒಂದಿಲ್ಲೊಂದು ಎಡವಟ್ಟುಗಳಿಂದಲೇ ಸುದ್ದಿಯಾಗುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೂಡ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅತ್ತ ಸಂಸತ್​ನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಭಾಷಣ ಮಾಡುತ್ತಿದ್ದರೇ, ಇತ್ತ ರಾಹುಲ್ ಗಾಂಧಿ ಮೊಬೈಲ್​ನಲ್ಲಿ ಬ್ಯುಸಿಯಾಗಿದ್ದರು.

 

ಕಾಂಗ್ರೆಸ್ ಸಂಸದರ ಸಾಲಿನಲ್ಲಿ ಎದುರನಿಲ್ಲೇ ತಾಯಿ ಸೋನಿಯಾ ಗಾಂಧಿಯವರೊಂದಿಗೆ ಕೂತಿದ್ದ ರಾಹುಲ್ ಗಾಂಧಿ ಸದನವನ್ನುದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಆರಂಭಿಸುತ್ತಿದ್ದಂತೆ ಮೊಬೈಲ್​ ನೋಡಲು ಆರಂಭಿಸಿದ್ರು. ಕೆಲ ಸಮಯ ಪಕ್ಕದಲ್ಲೇ ಕೂತಿದ್ದ ತಾಯಿಯೊಂದಿಗೆ ಮಾತನಾಡಿದ ರಾಹುಲ್ ಮತ್ತೆ ಮೊಬೈಲ್​ ವೀಕ್ಷಣೆ ಮುಂದುವರೆಸಿದರು.

 

ಸಂಸದ ರಾಹುಲ್ ಗಾಂಧಿ ಈ ವರ್ತನೆಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗ್ತಿದಂತೆ ಎಲ್ಲೆಡೆ ರಾಹುಲ್ ಗಾಂಧಿ ವರ್ತನೆಗೆ ಟೀಕೆಗಳು ವ್ಯಕ್ತವಾಗಿದೆ. ರಾಷ್ಟ್ರಪತಿಗಳು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತ ಗಂಭೀರ ಸನ್ನಿವೇಶದಲ್ಲೂ ರಾಹುಲ್ ಬಾಲಿಶ್ ತನದಿಂದ ವರ್ತಿಸಿದ್ದು ಸರಿಯಲ್ಲ ಎಂತಿದ್ದಾರೆ.

 

ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿಗಳು ದೇಶದಲ್ಲಿ ದಶಕಗಳ ನಂತ್ರ ಬಹುಮತದ ಸರ್ಕಾರ ಬಂದಿದೆ. ಹೆಚ್ಚು ಮಹಿಳಾ ಸಂಸದರು ಆಯ್ಕೆಯಾಗಿರೋದು ಸಂತಸದ ವಿಚಾರ. ಎಲ್ಲರಿಗೂ ಮನೆ, ಕೃಷಿಕರ ಆದಾಯ ದುಪ್ಪಟ್ಟು ಮಾಡುವುದು. ಎಲ್ಲ ಸಮುದಾಯಗಳ ಹಿತವನ್ನು ಕಾಪಾಡುವುದು ನಮ್ಮ ಸರ್ಕಾರದ ಧ್ಯೇಯ ಎಂದು ರಾಮನಾಥ್​​ ಕೋವಿಂದ್​​​ ಎಂದಿದ್ದಾರೆ.

 

Comments are closed.