ಭುವನೇಶ್ವರ: ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋವನ್ನು ಪತಿಯೇ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಒಡಿಶಾದ ಖಂಡಗಿರಿ ಪ್ರದೇಶದ ಉದಿತ್ ನಾರಾಯಣ್ ಭಟ್(25) ಎಂಬಾತ ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ಕೆಲ ತಿಂಗಳು ಸಂಸಾರ ನಡೆಸಿದ ಬಳಿಕ ಇಬ್ಬರ ನಡುವೆ ಜಗಳ, ಮನಸ್ತಾಪ ಹೆಚ್ಚಾಗಿ ಇಬ್ಬರು ಬೇರೆಯಾಗಿದ್ದರು.
ಇನ್ನು ತಮ್ಮ ದಾಂಪತ್ಯದ ಜೀವನದ ವೇಳೆ ಪತ್ನಿ ಜೊತೆಗಿನ ರಾಸಲೀಲೆಯನ್ನು ವಿಡಿಯೋ ಮಾಡಿಕೊಂಡಿದ್ದ. ಇದೀಗ ಪತ್ನಿ ಜೊತೆಗೆ ಜಗಳ ಮಾಡಿಕೊಂಡಿರುವ ಪತಿ ಖಾಸಗಿ ವಿಡಿಯೋಗಳನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದಾನೆ.
ಈ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ಪೊಲೀಸರು ಉದಿತ್ ನಾರಾಯಣ್ ನನ್ನು ಬಂಧಿಸಿದ್ದಾರೆ.
Comments are closed.