ಸೂರತ್(ಜೂನ್.30): ಸೆಲ್ಫಿ ತೆಗೆದುಕೊಳ್ಳಲೋಗಿ ಕಾಲು ಜಾರಿ ಗಂಗಾ ನದಿಗೆ ಬಿದ್ದು ಮೂವರು ಸ್ನೇಹಿತರು ಮೃತಪಟ್ಟಿರುವ ಘಟನೆ ರಿಷಿಕೇಶದಲ್ಲಿ ನಡೆದಿದೆ. ಸೂರತ್ ಮೂಲದ ಮೂವರು ಸ್ನೇಹಿತರು, ಉತ್ತರಖಂಡ್ಗೆ ಯಾತ್ರೆಗಾಗಿ ತೆರಳಿದ್ದರು. ರಿಷಿಕೇಶದ ಸಮೀಪ ತೆಪ್ಪಾದಲ್ಲಿ ಹೋಗುತ್ತಿದ್ದಾಗ ವೇಳೆ, ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ತೆಪ್ಪಾ ಉರುಳಿದ್ದು, ಮೂವರು ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ
ಇನ್ನು ಘಟನೆಗೆ ಸಂಬಂಧಿಸಿಂದತೆ ಸೂರತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ಮೂವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇತ್ತೀಚೆಗೆ ಪಿಕ್‌ನಿಕ್, ಪ್ರವಾಸ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಗೀಳು ಹೆಚ್ಚುತ್ತಿರುವುದರಿಂದ ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳ ಪಾಲಕ-ಪೋಷಕರು ಎಚ್ಚರ ವಹಿಸಬೇಕಿದೆ. ಪಾಲಕರಿಗೆ ಹೇಳದೆ ಮೋಜು ಮಸ್ತಿಗಾಗಿ ಹೋಗಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಆದ್ದರಿಂದ, ಮಕ್ಕಳ ಚಲನವಲನದ ಮೇಲೆ ನಿಗಾ ಇಟ್ಟು ಆಗಾಗ ಅವರಿಗೆ ಮಾರ್ಗದರ್ಶನ ಮಾಡುತ್ತಿರಬೇಕಾಗಿದೆ.
ಮಳೆಗಾಲದಲ್ಲಿ ಹಚ್ಚ ಹಸಿರಿನ ಪರಿಸರ ಕಾರಣದಿಂದ ಭೂಮಿ ಮೇಲಿನ ಸ್ವರ್ಗದಂತೆ ಕಾಣುವ ಗಂಗಾನದಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಆದರೆ, ತಮ್ಮ ನಿರ್ಲಕ್ಷ್ಯದಿಂದ ಸೆಲ್ಫಿಗೆ ಮುಂದಾಗಿ ಇಲ್ಲಿಯವರೆಗೂ ನೂರಾರು ಜನ ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿವೆ.
Comments are closed.