ಹೊಸದಿಲ್ಲಿ: ಎನ್‌ಡಿಎ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಜೇಬಿಗೆ ಬರೆ ನೀಡುವ ಆಯವ್ಯಯ ಇದಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದ್ದು, ಬಂಗಾರದ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್‌ನಲ್ಲಿ ಬರೆ ನೀಡಿದ್ದಾರೆ.
127 ನಿಮಿಷಗಳ ಕಾಲ ನಿರರ್ಗಳವಾಗಿ ಬಜೆಟ್ ಭಾಷಣ ಮಂಡಿಸಿದ ನಿರ್ಮಲಾ ಸೀತಾರಾಮನ್ ಚಾಣಕ್ಯ ನೀತಿ, ಉರ್ದು ಶಾಯರಿ, ತಮಿಳಿನ ತಿರುವಳ್ಳುವರ್ ಹೇಳಿಕೆ, ಕಥೆ, ಸ್ವಾಮಿ ವಿವೇಕಾನಂದ ಹೇಳಿಕೆ, ಉದ್ಯಮಿಗಳ ಕೋಟ್‌ಗಳನ್ನು ಪ್ರಸ್ತಾವಿಸಿದರು.
ಆದಾಯ ತೆರಿಗೆ ಪಾವತಿಸಲು ಪಾನ್ ಕಾರ್ಡ್ ಕಡ್ಡಾಯ ನಮೂದಿಸಬೇಕಾದ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆದರೆ ಚಿನ್ನ, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿದ್ದು, ಚಿನ್ನದ ಮೇಲಿನ ಆಮದು ಸುಂಕ ಕೂಡ ಹೆಚ್ಚು ಮಾಡಲಾಗಿದೆ.
ಮೊದಲ ಬಾರಿಗೆ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಗಳಿಸಲಾದ ಅಭೂತಪೂರ್ವ ಯಶಸ್ಸು ಪ್ರಸ್ತಾವಿಸಿದರು.
ನವಭಾರತ ನಿರ್ಮಾಣಕ್ಕೆ ಇಡೀ ದೇಶ ಬೆಂಬಲಕ್ಕೆ ನಿಂತಿದೆ. ಚಾಣಕ್ಯ ನೀತಿಯನ್ನು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಿದರು. ಭರವಸೆ ಇದ್ದರೆ ಮಾರ್ಗ ಇದ್ದೇ ಇರುತ್ತದೆ ಎಂದು ನಿರ್ಮಲಾ ತಿಳಿಸಿದರು.
ತೆರಿಗೆ ವಿಷಯವನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ತೆರಿಗೆದಾರರಿಗೆ ಧನ್ಯವಾದ ಅರ್ಪಿಸಿದರು.
ಪಾನ್ ಕಾರ್ಡ್-ಆಧಾರ್ ಕಾರ್ಡ್ ಜೋಡಣೆಗೆ ತುಸು ವಿನಾಯಿತಿ ನೀಡಲಾಗಿದೆ. ತೆರಿಗೆ ಪಾವತಿ ಮಾಡುವವರು ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ ಆಧಾರ್ ಸಂಖ್ಯೆ ನಮೂದಿಸಿ ಮುಂದುವರಿಯಬಹುದು ಎಂದು ನಿರ್ಮಲಾ ತಿಳಿಸಿದರು.
Comments are closed.