ರಾಷ್ಟ್ರೀಯ

ಸಂಸತ್ತಿನ ಆವರಣದಲ್ಲಿ ಇಲ್ಲದ ಕಸ ಗುಡಿಸಿ ಟ್ರೋಲ್ ಆದ ಸಂಸದೆ ಹೇಮಾಮಾಲಿನಿಗೆ ಪತಿ ಧರ್ಮೇಂದ್ರ ಕೊಟ್ಟ ಟಾಂಗ್ ನೋಡಿ…

Pinterest LinkedIn Tumblr

ನವದೆಹಲಿ: ಇತ್ತೀಚೆಗಷ್ಟೇ ಸ್ವಚ್ಛ ಭಾರತ ಅಭಿಯಾನದಡಿ ಸಂಸತ್ತಿನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಇಲ್ಲದ ಕಸ ಗುಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಆಹಾರವಾಗಿದ್ದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವರ ಪತಿಯೇ ನಯವಾಗಿ ಕಾಲೆಳೆದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಹೇಮಾ ಪತಿ ಹಾಗೂ ಹಿರಿಯ ಬಾಲಿವುಡ್‌ ನಟ ಧರ್ಮೇಂದ್ರ ಅವರು, ‘ಹೇಮಾ ತನ್ನ ಜೀವನದಲ್ಲಿ ಯಾವತ್ತಾದರೂ ಪೊರಕೆ ಹಿಡಿದಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ‘ಹೌದು, ನನಗೂ ಆಕೆ, ಕಸ ಗುಡಿಸುವುದರಲ್ಲಿ ಅನನುಭವಿಯಂತೆ ಕಾಣುತ್ತಾಳೆ’ ಎಂದಿದ್ದಾರೆ.

ಈ ಮೂಲಕ ಈಗಾಗಲೇ ಸಾಮಾಜಿಕ ಸಾಕಷ್ಟು ನಗೆ ಪಾಟಿಲಿಗೆ ಗುರಿಯಾಗಿರುವ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಕಾಲೆಳೆದಿದ್ದಾರೆ.

Comments are closed.