ರಾಷ್ಟ್ರೀಯ

ಪಾರ್ಲಿಮೆಂಟಿನಲ್ಲಿ ಮೋದಿ ಭೇಟಿ ಮಾಡಿದ ಆ ಮಗು ಯಾರದ್ದು?

Pinterest LinkedIn Tumblr


ನವದೆಹಲಿ: ಸಂಸತ್ತಿನಲ್ಲಿ “ಅತ್ಯಂತ ವಿಶೇಷ ಸ್ನೇಹಿತನನ್ನ ಭೇಟಿ ಮಾಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಮುದ್ದಾದ ಮಗುವೊಂದನ್ನು ಕೈಯಲ್ಲಿ ಹಿಡಿದುಕೊಂಡಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್​ ಎಲ್ಲ ಕಡೆ ಸಖತ್​ ವೈರಲ್​ ಆಗಿದ್ದು, ಕುತೂಹಲವನ್ನು ಹೆಚ್ಚಿಸಿದೆ.

ಇಂದು ನನ್ನನ್ನು ಸಂಸತ್ತಿನಲ್ಲಿ ಭೇಟಿಯಾಗಲು ಬಹಳ ವಿಶೇಷ ಸ್ನೇಹಿತರೊಬ್ಬರು ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಟೀಸರ್ ಪೋಸ್ಟ್‌ನಲ್ಲಿ ಬರೆದಿದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್‌, ಕಾಮೆಂಟ್​ಗಳ ಮೂಲಕ ಮೆಚ್ಚುಗೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಕಟ್ಟಡದಲ್ಲಿರುವ ಅವರ ಕಚೇರಿಯಲ್ಲಿ ಪ್ರಧಾನ ಮಂತ್ರಿಯೊಂದಿಗೆ ಭೇಟಿಯಾದ ಕೆಲವು ಸಂದರ್ಶಕರೊಂದಿಗೆ ಮಗು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೋಟೋಗಳಲ್ಲಿ, ಮಗುವು ಪಿಎಂ ಮೇಜಿನ ಮೇಲಿರುವ ಚಾಕೊಲೇಟ್‌ಗಳಲ್ಲಿ ಮಿನುಗುತ್ತಿರುವುದು ಸ್ಪಷ್ಟವಾಗಿದೆ.

ಇನ್ಸ್ಟಾಗ್ರಾಮ್ನಲ್ಲಿ, ಪಿಎಂ ಮೋದಿ ಅವರು ವಿಶ್ವದಲ್ಲೇ ಹೆಚ್ಚು ಫಾಲೋವರ್ಸ್​ ಹೊಂದಿರುವ ನಾಯಕರಾಗಿದ್ದಾರೆ. ಅವರು 25 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು ಅವರು ಮಾತ್ರ ಯಾರನ್ನು ಅನುಸರಿಸುತ್ತಿಲ್ಲ.

ಮೋದಿ ಅವರಿಗೆ ಅತ್ಯಂತ ಇಷ್ಟವಾದ ಇನ್ಸ್ಟಾ ಫೋಟೋಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವಿವಾಹದ ಬಳಿಕ ಈ ಪೋಟೋ ಪೋಸ್ಟ್ ಮಾಡಿದ್ದಾರೆ.

Comments are closed.