ರಾಷ್ಟ್ರೀಯ

ಯುವಮೋರ್ಚಾ ನಾಯಕನೊಂದಿಗೆ ಬಾತ್​ರೂಂನಲ್ಲಿ ಬಿಜೆಪಿ ನಾಯಕಿ!

Pinterest LinkedIn Tumblr


ದೇಶದಲ್ಲಿ ಬಿಜೆಪಿ ಅಧಿಕಾರ ಬರುತ್ತಿದ್ದಂತೆ ವಿವಾದಗಳ ಪ್ರಮಾಣವೂ ಹೆಚ್ಚುತ್ತಲೇ ಇದೆ. ಹೌದು ಸಲಿಂಗಕಾಮ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕರ ಸಾಲಿಗೆ ಇದೀಗ ಬಿಜೆಪಿ ನಾಯಕಿಯೊಬ್ಬರು ಹೊಸ ಸೇರ್ಪಡೆಯಾಗಿದ್ದು, ಕಮಲ ಪಾಳಯದ ನಾಯಕಿಯೊಬ್ಬಳು ಇನ್ನೊಬ್ಬ ಬಿಜೆಪಿಗನೊಂದಿಗೆ ಬಾತ್​​ರೂಂನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಹೌದು ಹಿಮಾಚಲ ಪ್ರದೇಶದ ರೀನಾ ಠಾಕೂರ್ ಇಂತಹದೊಂದು ವಿವಾದ ಸೃಷ್ಟಿಸಿದ ನಾಯಕಿ. ಈಕೆ ಬಿಜೆಪಿ ಯುವಮೋರ್ಚಾ ನಾಯಕ ಉಪನ್ ಪಟೇಲ್​ ಎಂಬಾತನೊಂದಿಗೆ ಬಾತ್​ರೂಂನಲ್ಲಿ ಸ್ನಾನ ಮಾಡುತ್ತಿರುವ 12 ನಿಮಿಷದ ವಿಡಿಯೋ ವೈರಲ್​ ಆಗಿದ್ದು, ಬಿಜೆಪಿಗೆ ತೀವ್ರ ಮುಜುಗರ ತಂದಿದೆ.

ನೀರು ಉಳಿಸಲು ಬಿಜೆಪಿ ನಾಯಕಿಯ ಹೊಸ ಪ್ರಯತ್ನ ಎಂಬ ಟ್ಯಾಗ್​ ಲೈನ್​ ಜೊತೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ವಿಡಿಯೋ ನೋಡಿದ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದು, ಸಧ್ಯದಲ್ಲೇ ಅವರಿಬ್ಬರ ವಿರುದ್ಧ ಕ್ರಮಜರುಗಿಸುತ್ತೇನೆ. ಈ ರೀತಿಯ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ದೇಶದಾದ್ಯಂತ ಬಿಜೆಪಿ ಲೀಡರ್​​ಗಳು ಪದೇ ಪದೇ ವಿವಾದಕ್ಕಿಡಾಗುತ್ತಿದ್ದು, ಹೈಕಮಾಂಡ್​ ಇಂತಹ ಚಟುವಟಿಕೆಗಳಿಗೆ ಹೇಗೆ ಬ್ರೇಕ್ ಹಾಕುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.