ನವದೆಹಲಿ: ಅಮೆರಿಕದ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಬೋಯಿಂಗ್ ಅಡಿಯಲ್ಲಿ ತಯಾರಿಸಲ್ಪಟಿರುವ ನಾಲ್ಕು ಅಪಾಚೆ ಹೆಲಿಕಾಪ್ಟರ್‌ಗಳನ್ನು ಶನಿವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು.
ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ವರ್ಷಗಳ ನಂತರ ಎಎಚ್64ಎ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ತಂಡ ಉತ್ತರ ಪ್ರದೇಶದ ಹಿಂಡಾನ್ ವಾಯುನೆಲೆಗೆ ಬಂದು ಸೇರಿದೆ. ಅಲ್ಲದೇ 22 ಹೆಲಿಕಾಪ್ಟರ್‌ಗಳ ಪೈಕಿ ಮತ್ತೆ ನಾಲ್ಕು ಕಾಪ್ಟರ್‌ಗಳು ಮುಂದಿನವಾರ ಬಂದು ಇಳಿಯಲಿದೆ.
8 ಹೆಲಿಕಾಪ್ಟರ್‌ಗಳು ಮುಂದಿನವಾರ ಪಠಾಣ್‌ಕೋಟ್ ವಾಯುನೆಲೆಗೆ ಬರಲಿವೆ. ಎಎಚ್64ಎ ಅಪಾಚೆ ಜಗತ್ತಿನ ಅತ್ಯಾಧುನಿಕ (High Technology) ಬಹೂಪಯೋಗಿ ಯುದ್ಧ ಹೆಲಿಕಾಪ್ಟರ್ ಎಂದು ಇವುಗಳು ಹೆಸರುವಾಸಿಯಾಗಿವೆ. ಸದ್ಯ ಬೋಯಿಂಗ್ ಹಾಗೂ ಅಮೆರಿಕ ಸರ್ಕಾರದ ಜತೆ 2015ರಲ್ಲಿ ಭಾರತ ವಾಯುಪಡೆ ಒಪ್ಪಂದಕ್ಕೆ ಸಹಿ ಹಾಕಿತ್ತು.
ಅಪಾಚೆ ಸರಣಿಯ ಕಾಪ್ಟರ್‌ಗಳ ಸೇರ್ಪಡೆಯಿಂದ ವಾಯುಪಡೆ ಬಲ ವೃದ್ಧಿಸಿದೆ ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತ ವಾಯುಪಡೆಯ ಮುಂದಿನ ಭವಿಷ್ಯದ ಅಗತ್ಯಗಳಿಗೆ ಬೇಕಾದಂತೆ ಹೆಲಿಕಾಪ್ಟರ್‌ಗಳನ್ನು ರೂಪಿಸಲಾಗಿದೆ.
‘ಭಾರತದ ರಕ್ಷಣಾ ಪಡೆಗಳ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ನಿಗದಿತ ವೇಳೆಗಿಂತ ಮುಂಚಿತವಾಗಿಯೇ ಯುದ್ಧದ ಹೆಲಿಕಾಪ್ಟರ್‌ಗಳನ್ನು ಪೂರೈಸುವ ಮೂಲಕ ಭರವಸೆ ಉಳಿಸಿಕೊಂಡಿದ್ದೇವೆ’ ಎಂದು ಬೋಯಿಂಗ್ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.
ಅಷ್ಟೇ ಅಲ್ಲದೇ ಬೋಯಿಂಗ್ ಸಂಸ್ಥೆಯು ಜಗತ್ತಿನಾದ್ಯಂತ 2 ಸಾವಿರಕ್ಕೂ ಹೆಚ್ಚು ಈ ಮಾದರಿಯ ಅಪಾಚೆ ಹೆಲಿಕಾಪ್ಟರ್‌ಗಳನ್ನು ಪೂರೈಸಿದೆ. ಮುಂದಿನ ವರ್ಷ ಭಾರತವು ಎಲ್ಲ 22 ಅಪಾಚೆ ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆ ಆರಂಭಿಸುತ್ತವೆ. ಭಾರತೀಯ ವಾಯುಸೇನೆಯು 2018ರಲ್ಲಿ ಅಮೆರಿಕದಲ್ಲಿ ಈ ಮಾದರಿಯ ಹೆಲಿಕಾಪ್ಟರ್‌ಗಳನ್ನು ಮುನ್ನಡೆಸುವ ತರಬೇತಿ ಪಡೆದುಕೊಂಡಿತ್ತು.
Comments are closed.