ಹೊಸದಿಲ್ಲಿ: ಬಿಜೆಪಿಯ ಪ್ರಮುಖ ರಾಜಕಾರಣಿಗಳ ಸಾಲಿನಲ್ಲಿ ನಿಲ್ಲುವ ಸುಷ್ಮಾ ಸ್ವರಾಜ್ ತಮ್ಮದೇ ರೀತಿಯಲ್ಲಿ ದೇಶ ಪ್ರೇಮ ಮೆರೆಯುತ್ತಿದ್ದರು. ಅತಿ ಕಿರಿಯ ವಯಸ್ಸಿಯಲ್ಲಿಯೇ ರಾಜಕೀಯ ರಂಗಕ್ಕೆ ಧುಮುಕಿದರು ತಂತ್ರಜ್ಞಾನದ ಜತೆಗೆ ಬೆಳೆದು ಸುಷ್ಮಾ ಸದಾ ಅಪ್ಡೇಟ್ ಆಗಿದ್ದರು.
ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದ ನಂತರ ವಿದೇಶಾಂಗ ವ್ಯವಹಾರ ಸಚಿವಾಲಯ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಸುಷ್ಮಾ ಸ್ವರಾಜ್ ಸೈ ಎನಿಸಿಕೊಂಡರು.
ಮೋದಿ ಎಲ್ಲರಿಗೂ ಸೂಚನೆ ನೀಡಿದಂತೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವುದರಲ್ಲಿಯೂ ಸುಷ್ಮಾ ಸೈ ಎನಿಸಿಕೊಂಡರು.
ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕವೇ ತಮ್ಮ ವ್ಯವಹಾರಗಳನ್ನು ನಿಭಾಯಿಸಿದ್ದ ಉದಾಹರಣೆ ಇದೆ. ಕೊಲ್ಲಿ ರಾಷ್ಟ್ರಗಳಲ್ಲಿ ಯಾರದರೂ ತೊಂದರೆಯಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ಟ್ವೀಟ್ ಮಾಡಿದರೆ ಸುಷ್ಮಾ ಸ್ವರಾಜ್ ಕ್ಷಣಮಾತ್ರದಲ್ಲಿಯೇ ಪ್ರತಿಕ್ರಿಯೆ ನೀಡಿ ಸಮಸ್ಯೆ ಪರಿಹಾರ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದರು.
ವಿಧಿಯಾಟ ಎಂದರೆ ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್ ಕೂಡ ನಿಜಕ್ಕೂ ಭಾವನಾತ್ಮಕವಾಗಿಯೇ ಇದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿದಾಗ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.
ಥ್ಯಾಂಕ್ಯೂ ನರೇಂದ್ರ ಮೋದಿ, ಥ್ಯಾಂಕ್ಯೂ ಪ್ರೈಮ್ ಮಿನಿಸ್ಟರ್. ಥ್ಯಾಂಕ್ಯೂ. ನನ್ನ ಜೀವನದಲ್ಲಿ ಇಂಥ ದಿನವನ್ನು ನೋಡುವುದಕ್ಕೆ ಕಾಯುತ್ತಿದ್ದೆ ಎಂದು ಟ್ವೀಟ್ ಮಾಡಿದ್ದರು. ಅಂತೆಯೇ ಆ. 5 ರಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಮಾತುಗಳಿಗೂ ಅವರು ಅಭಿನಂದನೆ ಸಲ್ಲಿಸಿದ್ದರು. ಅಮಿತ್ ಶಾ ಅವರ ಪ್ರಖರ ಮಾತುಗಳಿಗೆ ಭೇಷ್ ಎಂದೂ ಅವರು ಹೇಳಿದ್ದರು.
ಸಂವಿಧಾನದ 370ನೇ ವಿಧಿ ರದ್ದು ಆದ ದಿನವನ್ನು ನೋಡಿ ಸುಷ್ಮಾ ಸ್ವರಾಜ್ ನಂತರವೇ ಕೊನೆಯುಸಿರೆಳೆರುವುದು ವಿಧಿವಶವಾಗಿರುವುದು ವಿಧಿಯಾಟ.
Comments are closed.