ರಾಷ್ಟ್ರೀಯ

ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಯಲ್ಲಿ ನಗ್ನ ಕೂಟ ಆಯೋಜನೆಯ ಪೋಸ್ಟರ್​ ಹಂಚಿಕೆ

Pinterest LinkedIn Tumblr


ಪಣಜಿ(ಸೆ.24): ಉತ್ತರ ಗೋವಾದಲ್ಲಿ ನಗ್ನ ಕೂಟ (ನ್ಯೂಡ್​ ಪಾರ್ಟಿ) ಆಯೋಜಿಸಲಾಗಿದೆ ಎಂಬ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಘಟನೆ ಸಂಬಂಧ ಗೋವಾ ಪೊಲೀಸರು ಸೋಮವಾರ ತನಿಖೆ ಆರಂಭಿಸಿದ್ದಾರೆ.

ಪ್ರೈವೇಟ್​ ಗೋವಾ ಪಾರ್ಟಿಯ ಪೋಸ್ಟರ್​ ಬಿಡುಗಡೆ ಮಾಡಿದವರ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಅಲ್ಲದೇ, ರಾಜ್ಯದಲ್ಲಿ ಯಾವುದೇ ರೀತಿಯ ನಗ್ನ ಕೂಟ ಆಯೋಜನೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಯಲ್ಲಿ ನಗ್ನ ಕೂಟವನ್ನು ಆಯೋಜಿಸಲಾಗಿದೆ. 10ರಿಂದ 15 ವಿದೇಶಿ ಹುಡುಗಿಯರು ಮತ್ತು 10ಕ್ಕೂ ಹೆಚ್ಚು ಭಾರತೀಯ ಯುವತಿಯರು ನಗ್ನ ಕೂಟದ ಭಾಗವಾಗಲಿದ್ದಾರೆ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿತ್ತು. ಆದರೆ, ಯಾವ ನಿಗದಿತ ಸ್ಥಳದಲ್ಲಿ ಹಾಗೂ ಯಾವ ದಿನಾಂಕದಂದು ಈ ಕೂಟ ನಡೆಯಲಿದೆ ಎಂಬ ಮಾಹಿತಿ ಪೋಸ್ಟರ್​ನಲ್ಲಿ ಇಲ್ಲ.

ಪೋಸ್ಟರ್​ ಸಂಬಂಧಿಸಿದಂತೆ ಮಾತನಾಡಿರುವ ಗೋವಾ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಮಾ ಕೌಟಿನಾಹೊ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಪ್ರವಾಸೋದ್ಯಮ ಸಚಿವ ಮನೋಹರ್ ಆಜ್​ಗೋನ್ಕರ್​ ಈ ವಿಚಾರವಾಗಿ ತುರ್ತಾಗಿ ಮಧ್ಯಪ್ರವೇಶಿಸಿ, ಇಂತಹ ಕೂಟಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Comments are closed.