ಭೋಪಾಲ್: ಬಾಲಿವುಡ್ ನ ಬಿ-ಗ್ರೇಡ್ ನಯಿರು ಸೇರಿದಂತೆ 40ಕ್ಕೂ ಹೆಚ್ಚು ಕಾಲ್ ಗರ್ಲ್ಸ್ ಸೇರಿ ದೊಡ್ಡ ದೊಡ್ಡ ಕುಳಗಳನ್ನೇ ಹನಿಟ್ರ್ಯಾಪ್ ಗೆ ಕೆಡವಿದ್ದು ಅದರಲ್ಲಿ ಮಧ್ಯಪ್ರದೇಶದ ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಗಣ್ಯ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಾಜಿ ಸಂಧಾನ ಹಾಗೂ ಸೆಕ್ಸ್ ನಡೆಸುವ ವೇಳೆ ಚಿತ್ರೀಕರಿಸಿರುವ 92 ಎಚ್ ಡಿ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಎರಡು ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳುನ್ನು ವಶಪಡಿಸಿಕೊಂಡಿದ್ದು, ಈ ಸುಲಿಗೆ ದಂಧೆ ಸಂಬಂಧ ಐವರು ಮಹಿಳೆಯರನ್ನು ಬಂಧಿಸಲಾಗಿದೆ.
ಬಾಲಿವುಡ್ ಬಿ-ಗ್ರೇಡ್ ನಟಿ ಶ್ವೇತಾ ಸ್ಟಾಪ್ನಿಲ್ ಜೈನ್ ಈ ಹನಿಟ್ರ್ಯಾಪ್ ಕಿಂಗ್ ಪಿನ್ ಆಗಿದ್ದಾಳೆ. ಮೊದಲಿಗೆ ಮಂತ್ರಿಗಳು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಅವರ ಜೊತೆ ಮೊಬೈಲ್ ನಲ್ಲಿ ಸಂವಾದ ನಡೆಸಿ ಅವರನ್ನು ಸೆಕ್ಸ್ ಗೆ ಆಹ್ವಾನಿಸುತ್ತಿದ್ದಳು.
ನಂತರ ಅವರನ್ನು 5 ಸ್ಟಾರ್ ಹೋಟಲ್ ಗಳು ಅಥವಾ ಅತಿಥಿ ಗೃಹಗಳಿಗೆ ಆಹ್ವಾನಿಸಿ ಅವರೊಂದಿಗೆ ಸೆಕ್ಸ್ ನಡೆಸಿದ ದೃಶ್ಯಗಳನ್ನು ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗುತ್ತಿತ್ತು. ಈ ಸಂಬಂಧ ಶ್ವೇತಾಳ ಪತ್ನಿ ಸ್ಟಾಪ್ನಿಲ್ ಜೈನ್ ನಿಂದ 6 ಹಾರ್ಡ್ ಡಿಸ್ಕ್ ಗಳನ್ನು ಎಸ್ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ವಿಡಿಯೋಗಳನ್ನು ಇಟ್ಟುಕೊಂಡು ಸರ್ಕಾರದ ಟೆಂಡರ್, ದೊಡ್ಡ ದೊಡ್ಡ ಕಾಮಗಾರಿಗಳು ತಮಗೆ ಬೇಕಾದವರಿಗೆ ಮಾಡಿಸಿಕೊಳ್ಳುತ್ತಿದ್ದರು.
Comments are closed.