DTH ಹಾಗೂ ಕೇಬಲ್ ಟಿವಿ ಜಾಲಗಳಿಗೆ ನೂತನ ಶುಲ್ಕ ನೀತಿಯನ್ನು ಪರಿಚಯಿಸಿದ್ದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ನಡೆಯಿಂದಾಗಿ ಮಾಸಿಕ ಕೇಬಲ್ ಪ್ಯಾಕ್‌ಗಳ ಶುಲ್ಕದಲ್ಲಿ ಭಾರೀ ಏರಿಕೆಯಾಗಿತ್ತು. ಈ ಕಾರಣ ತಾನಿಟ್ಟ ತಪ್ಪು ಹೆಜ್ಜೆಯನ್ನು ಸರಿಪಡಿಸಲು TRAI ಅನೇಕ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿತ್ತು.
ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟವು (AIDCF) ಕೇಬಲ್ ಟಿವಿ ಸೇವೆಗಳ ಶುಲ್ಕದ ವಿಚಾರದಲ್ಲಿ ಸಣ್ಣ ಬದಲಾವಣೆ ತಂದಿದ್ದು, ಕೇಬಲ್ ದರಗಳು ಕಡಿಮೆಯಾಗಲಿವೆ.
ತನ್ನ ಗ್ರಾಹಕರಿಗೆ 150 ಚಾನೆಲ್‌ಗಳ ಸೇವೆಯನ್ನು 130 ರೂ.ಗಳ ಕನಿಷ್ಠ ಮಟ್ಟದ ಶುಲ್ಕದ ದರದಲ್ಲಿ ನೀಡಲು AIDCF ನಿರ್ಧರಿಸಿದೆ. ಈ ಮುನ್ನ, 100 ಕ್ಕಿಂತ ಹೆಚ್ಚಿನ ಚಾನೆಲ್‌ಗಳು ಬೇಕಿದ್ದಲ್ಲಿ, ಪ್ರತಿ ಹೆಚ್ಚುವರಿ ಚಾನೆಲ್ ಮೇಲೆ 20-25 ರೂ.ಗಳ ಶುಲ್ಕ ವಿಧಿಸಲಾಗುತ್ತಿತ್ತು.
ಈ ಸೌಲಭ್ಯವು ಸದ್ಯಕ್ಕೆ ಕೇವಲ ಕೇಬಲ್ ಟಿವಿ ಗ್ರಾಹಕರಿಗೆ ಮಾತ್ರವೇ ಲಭ್ಯವಿದ್ದು, DTH ಗ್ರಾಹಕರಿಗೆ ಇನ್ನೂ ಇದರ ಅನುಕೂಲ ಸಿಕ್ಕಿಲ್ಲ. ಸದ್ಯದ ಮಟ್ಟಿಗೆ ಟಾಟಾ ಸ್ಕೈ ಹಾಗೂ ಸನ್ ಡೈರೆಕ್ಟ್‌ಗಳು ತಮ್ಮ ಮೂಲ ಶುಲ್ಕ ದರದಲ್ಲಿ ಕೊಂಚ ಇಳಿಕೆ ಮಾಡಿವೆ.
Comments are closed.