ರಾಷ್ಟ್ರೀಯ

ಜಾಗತಿಕ ಹಸಿವು ಸೂಚ್ಯಂಕದಲ್ಲಿ 102ನೇ ಸ್ಥಾನ ಪಡೆದುಕೊಂಡಿರುವ ಭಾರತ

Pinterest LinkedIn Tumblr

ಹೊಸದಿಲ್ಲಿ: 2019ರ ಜಾಗತಿಕ ಹಸಿವಿನ ಸೂಚ್ಯಂಕ ಪ್ರಕಟವಾಗಿದ್ದು, ಅತಿಹೆಚ್ಚು ಹಸಿವಿನಿಂದ ಬಳಲುತ್ತಿರುವ 45 ದೇಶಗಳ ಪೈಕಿ ಭಾರತವೂ ಒಂದು ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಜರ್ಮನಿಯ ಸ್ವಯಂಸೇವಾ ಸಂಸ್ಥೆ ‘ವೆಲ್‌ ತ್ಹಂಗರ್ ಲೈಫ್’ ಮತ್ತು ಐರ್ಲೆಂಡ್‌ನ‌ ‘ಕನ್ಸರ್ನ್ ವರ್ಲ್ಡ್ ವೈಡ್‌ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿದ್ದು, ಒಟ್ಟು 117 ರಾಷ್ಟ್ರಗಳನ್ನು ಸಮೀಕ್ಷೆಗೆ ಒಳಪಡಿಸಿದೆ.

ಸಮೀಕ್ಷೆಯಲ್ಲಿ ಒಟ್ಟು 117 ದೇಶಗಳ ಪಾಲ್ಗೊಂಡಿದ್ದು, 102ನೇ ಸ್ಥಾನಕ್ಕೆ ಕುಸಿದಿರುವ ಭಾರತ ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್ ದೇಶಗಳ ಪೈಕಿ ಕನಿಷ್ಠ ಸೂಚ್ಯಂಕ ಪಡೆದು ಕೊಂಡಿದೆ. ಅಪೌಷ್ಠಿಕತೆಯ ಸಮಸ್ಯೆಯ ಸುಳಿಯಲ್ಲಿರುವ ದೇಶಗಳಿಗಿಂತ ಹಿಂದುಳಿದಿದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ 102ನೇ ಸ್ಥಾನ ಪಡೆದುಕೊಂಡಿರುವ ಭಾರತ ಗಂಭೀರ ಹಸಿವಿನ ಸಮಸ್ಯೆ ಮತ್ತು ಅಪೌಷ್ಠಿಕತೆಯ ಸಮಸ್ಯೆಯ ಸುಳಿಯಲ್ಲಿರುವ ದೇಶಗಳಾದ ಚೀನಾ, ಬಾಂಗ್ಲಾ, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗಿಂತ ಹಿಂದುಳಿದಿದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕೆ 98ನೇ ಸ್ಥಾನ ಲಭಿಸಿದ್ದು, ಭಾರತ ಪಾಕಿಸ್ತಾನದ ಎದುರು ಸ್ಥಾನ 4 ಸ್ಥಾನಗಳ ಕುಸಿತ ಕಂಡಿದೆ.

ವಿಶ್ವಾದ್ಯಂತ, ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, 785 ದಶಲಕ್ಷದಿಂದ 822 ದಶಲಕ್ಷಕ್ಕೆ ಏರಿದೆ.

Comments are closed.