ರಾಷ್ಟ್ರೀಯ

ಹಣೆಯ ಬರಹ ಅತ್ಯಾಚಾರವಿದ್ದಂತೆ, ತಡೆಯಲಾಗದಿದ್ದರೆ ಎಂಜಾಯ್ ಮಾಡಿ: ಕೇರಳ ಸಂಸದನ ಮಡದಿ!

Pinterest LinkedIn Tumblr


ಕೇರಳದ ಕೊಚ್ಚಿ ನಗರದ ಭಾಗಗಳು ಜಲಾವೃತಗೊಂಡಿದ್ದು, ಸಮಸ್ಯೆ ಪರಿಹರಿಸಲು ವಿಫಲವಾಗಿರುವ ಕೊಚ್ಚಿ ಕಾರ್ಪೊರೇಷನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇರಳ ಕೇರಳದ ಸಂಸದ ಹಿಬಿ ಈಡನ್ ಅವರ ಪತ್ನಿ ಫೇಸ್ ಬುಕ್ ಪೋಸ್ಟ್ ಒಂದರಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ.

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜಲಾವೃತಗೊಂಡಿರುವ ಮನೆಯಿಂದ ತಮ್ಮ ಮಗುವನ್ನು ರಕ್ಷಿಸಿರುವ ವಿಡಿಯೋ ಹಾಗೂ ತಮ್ಮ ಪತಿ ಸಿಜ್ಲರ್ ಊಟ ಸೇವಿಸುತ್ತಿರುವ ಎರಡು ಪ್ರತ್ಯೇಕ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಹಿಬಿ ಈಡನ್ ಅವರ ಪತ್ನಿ ಆ್ಯನಾ ಲಿಂಡಾ ಈಡನ್ ವಿಧಿ ಎನ್ನುವುದು ಅತ್ಯಾಚಾರವಿದ್ದಂತೆ, ಏನೂ ಮಾಡಲು ಸಾಧ್ಯವಿಲ್ಲದಾಗ ಅದನ್ನು ಎಂಜಾಯ್ ಮಾಡಲು ಟ್ರೈ ಮಾಡಿ ಎಂದು ಹೇಳಿದ್ದಾರೆ.

ಸಂಸದರ ಪತ್ನಿಯ ಸಂವೇದನಾ ರಹಿತ ಫೇಸ್ ಬುಕ್ ಪೋಸ್ಟ್ ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ ತಮ್ಮ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿರುವ ಆ್ಯನಾ ಲಿಂಡಾ ಈಡನ್ ನನ್ನ ಪೋಸ್ಟ್ ಮೂಲಕ ಯಾರಿಗೂ ನೋವುಂಟುಮಾಡುವ ಉದ್ದೇಶ ಇರಲಿಲ್ಲ. ಮಹಿಳೆಯರ ಕಷ್ಟವನ್ನು ನಿಂದಿಸುವ ಉದ್ದೇಶ ಹೊಂದಿರಲಿಲ್ಲ. ಸಾರ್ವಜನಿಕ ಜೀವನದಲ್ಲಿರುವವರ ಪತ್ನಿಯಾಗಿ ಜನತೆಯ ಸಂಕಷ್ಟವನ್ನು ಅರಿತು ಅವರೊಟ್ಟಿಗೆ ನಿಲ್ಲಲು ಯತ್ನಿಸಿದ್ದೇನೆ, ನನ್ನ ಫೇಸ್ ಬುಕ್ ಪೋಸ್ಟ್ ನಿಂದ ತಪ್ಪು ಸಂದೇಶ ರವಾನೆಯಾಗಿದೆಯಾದ್ದರಿಂದ ಬೇಷರತ್ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Comments are closed.