ಮನೋರಂಜನೆ

ಚೈನೀಸ್‌ ಪಟಾಕಿಗಳನ್ನು, ಆಮದು, ಮಾರಾಟ ಹಾಗೂ ಬಳಸದಂತೆ ಕಸ್ಟಮ್‌ ಅಧಿಕಾರಿಗಳು ಸೂಚನೆ

Pinterest LinkedIn Tumblr

ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನಲೆ ವಾಯು ಮಾಲಿನ್ಯದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಅಕ್ರಮವಾಗಿ ಯಾವುದೇ ಚೈನೀಸ್‌ ಪಟಾಕಿಗಳನ್ನು, ಆಮದು ಮಾಡದಂತೆ, ಮಾರಾಟ ಮಾಡದಂತೆ, ಹಾಗೂ ಬಳಸದಂತೆ ಕಸ್ಟಮ್‌ ಅಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

ಚೀನಾದ ಪಟಾಕ್ಷಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವುದು ಮತ್ತು ಭಾರತದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆದೇಶ ಹೊರಡಿಸಿರುವ ಕಸ್ಟ್‌ಮ್‌ ಅಧಿಕಾರಿಗಳು, ಚೀನಾದ ಪಟಾಕಿಳನ್ನು ಮಾರಾಟ ಮಾಡುವ, ಶೇಖರಿಸುವ, ಯಾವುದೇ ಮೂಲಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನು ಕಸ್ಟಮ್‌ ಆಕ್ಟ್‌ 1962 ಅನ್ವಯ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಜೊತೆಗೆ ಚೈನೀಸ್‌ ಪಟಾಕಿಗಳ ಬಳಕೆಯನ್ನು 2008 ಸ್ಫೋಟಕ ಕಾಯ್ದೆ(ಎಕ್ಸಪ್ಲೋಸಿವ್‌ ಆಕ್ಟ್‌) ವಿರೋಧಿಸುತ್ತದೆ, ಇವುಗಳಲ್ಲಿ ನಿಷೇಧಿತ ರಾಸಾಯನಿಕಗಳಾದ ರೆಡ್‌ ಲೀಡ್‌, ಕಾಪರ್‌ ಆಕ್ಸೈಡ್‌, ಲೀಥಿಯಂ ಇನ್ನೀತರ ವಸ್ತುಗಳ ಬಳಕೆ ಇರುವುದರಿಂದ , ಹಾಗೇ ಈ ಪಟಾಕಿಗಳು ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರುವುದರಿಂದ ಈ ಪಟಾಕಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಪಟಾಕಿಗಳನ್ನು ಕೊಳ್ಳುವ ಮುನ್ನ ಅವುಗಳ ವಿವರಗಳನ್ನು ಪರಿಶೀಲಿಸಿ ಅಪಾಯಕಾರಿ ಚೈನೀಸ್‌ ಪಟಾಕಿಗಳನ್ನು ಕೊಂಡುಕೊಳ್ಳದಂತೆ ಸೂಚನೆ ಹೊರಡಿಸಲಾಗಿದೆ. ಹಾಗೆಯೇ ಸಾರ್ವಜನಿಕರು ಈ ರೀತಿಯ ಪಟಾಕಿ ಮಾರಾಟ ಮಾಡುವವರನ್ನು ಕಂಡರೆ 044-25256800 ಕಸ್ಟಮ್‌ ಕಂಟ್ರೋಲ್‌ ರೂಮ್‌ ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.

ಈ ಬಾರಿಯ ದೀಪಾವಳಿಯನ್ನು ಪರಿಸರ ಸ್ನೇಹಿಯನ್ನಾಗಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್‌ ಅಕ್ಟೋಬರ್‌ 26ರಿಂದ 29ರ ವರೆಗೆ ಕೊನ್ನೊಟ್‌ ಎಂಬಲ್ಲಿ ದೆಹಲಿ ಸರ್ಕಾರದಿಂದ ದೀಪಾವಳಿ ಆಚರಿಸುವುದಾಗಿ ತಿಳಿಸಿದ್ದಾರೆ. ದೀಪಗಳ ಅಲಂಕಾರ, ಆಹಾರ ಮೇಳಗಳ ಆಯೋಜನೆ ಮೂಲಕ ಸರ್ಕಾರ ದೆಹಲಿ ಜನತೆಗೆ ಮಾಲಿನ್ಯ ಮುಕ್ತ ದೀಪಾವಳಿಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.

Comments are closed.