ನವದೆಹಲಿ : ಬ್ಯಾಂಕ್ ನೌಕರರು ಪದೇ ಪದೆ ಮುಷ್ಕರಕ್ಕೆ ಕರೆ ನೀಡಿ ತೊಂದರೆ ಕೊಡದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಹೇಳಿದೆ ಎನ್ನಲಾಗಿದೆ. ಬ್ಯಾಂಕ್ ಒಕ್ಕೂಟಗಳ ನೌಕರರು ಒಂದು ದಿನದ ಮುಷ್ಕರಕ್ಕೆ ಕುಳಿತಿದ್ದರಿಂದ ಭಾರತದಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯಾಚರಣೆಗಳ ಮೇಲೆ ಭಾಗಶಃ ಹೊಡೆತ ಬಿದಿತ್ತು, ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಮುಷ್ಕರಕ್ಕೆ ಕನಿಷ್ಠ 14 ದಿನಗಳ ಮೊದಲು ಬ್ಯಾಂಕ್ಗಳು ನೋಟಿಸ್ ನೀಡಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯವನ್ನು ಉಲ್ಲೇಖಿಸಿದ ವರದಿಯನ್ನು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಸಾರ್ವಜನಿಕ ವಲಯದ 10 ಬ್ಯಾಂಕ್ಗಳನ್ನು ನಾಲ್ಕು ದೊಡ್ಡ ಬ್ಯಾಂಕ್ಗಳಾಗಿ ವಿಲೀನಗೊಳಿಸುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ) ಪ್ರತಿಭಟನೆಗೆ ಕರೆ ನೀಡಿದ್ದವು. ಇದರಿಂದ . ಬ್ಯಾಂಕಿಂಗ್ ಸೇವೆಗಳಾದ ನಗದು ಹಿಂಪಡೆಯುವಿಕೆ, ಠೇವಣಿ ಇರಿಸುವಿಕೆ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇತರ ಸೇವೆಗಳಲ್ಲಿ ದೇಶಾದ್ಯಂತ ವ್ಯತ್ಯಯ ಉಂಟಾಗಿತ್ತು.
Comments are closed.