ನವದೆಹಲಿ: ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ನೈಜೀರಿಯನ್ ಸೆಲೆಬ್ರಿಟಿಯನ್ನು ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್ ಎಫ್) ದೆಹಲಿ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನೈಜೀರಿಯನ್ ಸೆಲೆಬ್ರಿಟಿ ಓಲಾಮಿಲೆಕಾನ್ ಎಂ ಅಕಾನಬಿ ಓಜೋರಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ಹೇಳಿದೆ.
ವಿಸ್ತಾರಾ ಏರ್ ಲೈನ್ ನ ವಿಮಾನದಲ್ಲಿ ಗೋವಾ ಟಿಕೆಟ್ ಹೊಂದಿದ್ದ ಈ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ವೀಸಾ ಅವಧಿ ಅಂತ್ಯಗೊಂಡಿರುವುದು ಪತ್ತೆಯಾಗಿತ್ತು. ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲಿ ಉಳಿದುಕೊಂಡಿದ್ದ ಓಲಾಮಿಲೆಕಾನ್ ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಜೀರಿಯನ್ ಪ್ರಜೆಯ ವೀಸಾ ಅವಧಿ 2011ಕ್ಕೆ ಅಂತ್ಯಗೊಂಡಿದೆ ಎಂದು ಇಮಿಗ್ರೇಶನ್ ಮತ್ತು ಕೇಂದ್ರ ಗುಪ್ತಚರ ಇಲಾಖೆ ಖಚಿತಪಡಿಸಿದೆ ಎಂದು ಸಿಐಎಸ್ ಎಫ್ ಅಧಿಕಾರಿಗಳು ವಿವರಿಸಿದ್ದಾರೆ. ಮುಂದಿನ ವಿಚಾರಣೆಗಾಗಿ ಸೆಲೆಬ್ರಿಟಿಯನ್ನು ಇಂಟೆಲಿಜೆನ್ಸ್ ಬ್ಯೂರೋ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.