ನವದೆಹಲಿ : ಸತತ ಮೂರನೇ ತಿಂಗಳು, ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಬೆಲೆಯಲ್ಲಿ ಹೆಚ್ಚಳವಾಗಿದೆ. ಇಂದು ಇಂದು ಸಿಲಿಂಡರ್‌ಗೆ ಸುಮಾರು ₹ 76 ರಷ್ಟು ಹೆಚ್ಚಿಸಲಾಗಿದೆ. ಇಂಡೇನ್ ಆಯಿಲ್ನ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ಎಲ್ಪಿಜಿ ಸಿಲಿಂಡರ್ನ 14.2 ಕೆಜಿ ಸಬ್ಸಿಡಿ ರಹಿತ ಬೆಲೆ ಈಗ ದೆಹಲಿಯಲ್ಲಿ 1 681.50, ಕೋಲ್ಕತ್ತಾದಲ್ಲಿ 6 706, ಮುಂಬೈನಲ್ಲಿ 1 651 ಮತ್ತು ಚೆನ್ನೈನಲ್ಲಿ 6 696 ಮಾರಾಟವಾಗಲಿದೆ ಎನ್ನಲಾಗಿದೆ.
ಹೊಸ ಬೆಲೆಗಳು ನವೆಂಬರ್ 1 ರಿಂದ ಜಾರಿಗೆ ಬರುತ್ತವೆ. ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಎಲ್‌ಪಿಜಿ ಬೆಲೆಯನ್ನು 15 ರಷ್ಟು ಹೆಚ್ಚಿಸಲಾಗಿತ್ತು. ಸೆಪ್ಟೆಂಬರ್ ಕೂಡ ಇದೇ ರೀತಿಯ ₹ 15.50ರಲ್ಲಿ ಹೆಚ್ಚಳ ಮಾಡಲಾಗಿತ್ತು. ಮೆಟ್ರೋಗಳಲ್ಲಿ ಸಬ್ಸಿಡಿ ರಹಿತ ಇಂಡೇನ್ ಗ್ಯಾಸ್ ಬೆಲೆಗಳು (ರೂ. / 14.2 ಕೆಜಿ ಸಿಲಿಂಡರ್)ನವೆಂಬರ್ 01, 2019 ರಿಂದ ಅನ್ವಯವಾಗುವಂತೆ
ದೆಹಲಿ 681.50
ಕೋಲ್ಕತಾ 706.00
ಮುಂಬೈ 651.00
ಚೆನ್ನೈ 696.00
ಅಡುಗೆ ಅನಿಲ (ಎಲ್ಪಿಜಿ) ಗ್ರಾಹಕರಿಗೆ ಅಕ್ಟೋಬರ್ ಒಂದರ ತಿಂಗಳ ಮೊದಲ ದಿನವೇ ಬಿಗ್ ಶಾಕ್ ಎದುರಾಗಿದೆ! ಅಕ್ಟೊಬರ್ ತಿಂಗಳಲ್ಲಿ ಎಲ್ಪಿಜಿ ಬೆಲೆ ಏರಿಕೆ ಕಂಡಿದೆ. ಈ ಏರಿಕೆ ನಂತ್ರ ಎರಡು ತಿಂಗಳಲ್ಲಿ 14.2 ಕೆ.ಜಿ ಅಡುಗೆ ಅನಿಲದ ಬೆಲೆ 15 ರೂಪಾಯಿ ಹೆಚ್ಚಾದಂತಾಗಿದೆ. ಸೆಪ್ಟಂಬರ್ ತಿಂಗಳಿನಿಂದ ಸತತವಾಗಿ ಎರಡು ತಿಂಗಳು ಅಡುಗೆ ಅನಿಲ ದರ ಏರಿದಂತಾಗಿದೆ.
ಸಬ್ಸಿಡಿ ರಹಿತ ಎಲ್ಪಿಜಿ
ಸಬ್ಸಿಡಿ ರಹಿತ ಅಡುಗೆ ಅನಿಲ ದರ ದೆಹಲಿಯಲ್ಲಿ, 14.2 ಕೆ.ಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ ರೂ. 605 ಆಗಿದೆ. ಮುಂಬೈನಲ್ಲಿ ರೂ. 574 , ಕೋಲ್ಕತ್ತಾದಲ್ಲಿ ರೂ. 630 ಮತ್ತು ಚೆನ್ನೈನಲ್ಲಿ ರೂ. 620 ಏರಿಕೆ ಕಂಡಿದೆ. ದೆಹಲಿಯಲ್ಲಿ 19 ಕೆ.ಜಿ ತೂಕದ ಸಿಲಿಂಡರ್ ಬೆಲೆ ರೂ. 1085 ರಷ್ಟಿದೆ.
ಸೆಪ್ಟೆಂಬರ್ ನಿಂದ ಬೆಲೆಗಳ ಏರಿಕೆ
ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ರೂ. 590, ಕೋಲ್ಕತ್ತಾದಲ್ಲಿ ರೂ. 616.50, ಮುಂಬೈ ಮತ್ತು ಚೆನ್ನೈನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ಕ್ರಮವಾಗಿ ರೂ. 562 ಮತ್ತು 606.50 ರಷ್ಟಿತ್ತು. ಅದೇ ಸಮಯದಲ್ಲಿ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ ರೂ. 1054.50, ಕೋಲ್ಕತ್ತಾದಲ್ಲಿ ರೂ. 1114.5, ಮುಂಬೈನಲ್ಲಿ ರೂ. 1008.50 ಮತ್ತು ಚೆನ್ನೈನಲ್ಲಿ ರೂ. 1174.50 ರಷ್ಟಿತ್ತು.
ನೈಸರ್ಗಿಕ ಅನಿಲ ಬೆಲೆ
ಪ್ರತಿ ಅರು ತಿಂಗಳಿಗೊಮ್ಮೆಯಂತೆ ನೈಸರ್ಗಿಕ ಅನಿಲ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್ 1 ಮತ್ತು ಅಕ್ಟೋಬರ್ 1 ರಂದು ಅನಿಲ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಗೊಬ್ಬರ ತಯಾರಿಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ನೈಸರ್ಗಿಕ ಅನಿಲ ಬಳಸ ಲಾಗುತ್ತದೆ. ಜೊತೆಗೆ ಸಿಎನ್‌ಜಿಯಿಂದ ವಾಹನಗಳಲ್ಲಿ ಇಂಧನವಾಗಿ ಮತ್ತು ಮನೆಗಳಲ್ಲಿ ಅಡುಗೆ ಅನಿಲವಾಗಿ ಬಳಕೆಯಾಗುತ್ತದೆ.
ಪ್ರತಿವರ್ಷ 12 ಸಿಲಿಂಡರ್
ದೇಶದ ಕುಟುಂಬಗಳು ಪ್ರತಿವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ವಿಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
Comments are closed.