ಹೊಸ ದಿಲ್ಲಿ: ಭಾರತದ 13 ಲಕ್ಷ ಜನರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಡಾರ್ಕ್ ವೆಬ್ ಮೂಲಕ ಕಾಳ ಸಂತೆಯಲ್ಲಿ ಬಿಕರಿಯಾಗಿರುವ ಕಳವಳಕಾರಿ ಪ್ರಕರಣದ ಬಗ್ಗೆ ಕಟ್ಟುನಿಟ್ಟಾದ ತನಿಖೆ ನಡೆಸುವಂತೆ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ. ”ಸೋರಿಕೆಯಾಗಿರುವ ಕಾರ್ಡ್‌ಗಳ ಡೇಟಾ ಖಚಿತಪಡಿಸಿಕೊಂಡು ಅಂತಹ ಕಾರ್ಡ್‌ಗಳನ್ನು ತಕ್ಷಣ ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಿ ಹಾಗೂ ಹೊಸ ಕಾರ್ಡ್‌ಗಳನ್ನು ನೀಡಿ ಗ್ರಾಹಕರಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ,” ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.
ದಂಧೆ ಬಯಲಿಗೆಳೆದಿದ್ದ ಐಬಿಎ ಗ್ರೂಪ್:
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಹ್ಯಾಕರ್‌ಗಳು ನಡೆಸುವ ವೆಬ್‌ಸೈಟ್‌ಗಳಲ್ಲಿಬಿಕರಿಯಾಗುತ್ತಿದ್ದು ಇದರಿಂದ ಸೈಬರ್ ಹಣ ಕಳವು ದಂಧೆ ಜೋರಾಗುವ ಅಪಾಯವಿದೆ ಎಂದು ವರದಿಯೊಂದು ಎಚ್ಚರಿಸಿತ್ತು. ವಿವಿಧ ಬ್ಯಾಂಕ್‌ಗಳ ಮೂಲಕ 13 ಲಕ್ಷ ಭಾರತೀಯ ಗ್ರಾಹಕರು ಹೊಂದಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಹ್ಯಾಕರ್‌ಗಳು ಆನ್‌ಲೈನ್‌ನ ನಿಗೂಢ ಜಗತ್ತಿನಲ್ಲಿನಡೆಸುವ ‘ಜೋಕರ್ಸ್ ಸ್ಟ್ಯಾಶ್’ ಎಂಬ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿವೆ. ಒಂದು ಕಾರ್ಡ್‌ನ ವಿವರವು 7,092 ರೂ.ಗೆ ಬಿಕರಿಯಾಗುತ್ತಿವೆ ಎಂದು ಸೈಬರ್ ಸೆಕ್ಯೂರಿಟಿ ಸಾಫ್ಟ್‌ವೇರ್ ಕಂಪನಿ ಐಬಿಎ ಗ್ರೂಪ್ ಈ ದಂಧೆಯನ್ನು ಬಯಲಿಗೆಳೆದಿತ್ತು.
ಭಾರತೀಯ ಗ್ರಾಹಕರ ಕಾರ್ಡ್ ವಿವರಗಳು ‘ಇಂಡಿಯಾ-ಮಿಕ್ಸ್ -ನ್ಯೂ-01’ ಹೆಸರಿನ ಜಾಹೀರಾತು ರೂಪದಲ್ಲಿ ಜೋಕರ್ಸ್ ಸ್ಟ್ಯಾಶ್ ಎಂಬ ಹ್ಯಾಕರ್‌ಗಳ ವೆಬ್‌ನಲ್ಲಿ ಮಾರಾಟವಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಅಂದರೆ ಅ.28ರಿಂದ ಫೈನಾನ್ಷಿಯಲ್ ಸೈಬರ್ ಕ್ರೈಮ್ ನಡೆಯುತ್ತಿದೆ. 13 ಲಕ್ಷ ಗ್ರಾಹಕರ ಕಾರ್ಡ್ ವಿವರಗಳು ಇಲ್ಲಿ ಎರಡು ವ್ಯಾಲ್ಯೂಮ್‌ಗಳಲ್ಲಿ ಬಟಾಬಯಲಾಗಿದ್ದು, ದುಡ್ಡು ಕೊಟ್ಟವರಿಗೆ ಬಿಕರಿಯಾಗುತ್ತಿವೆ. ಈ ಮಾಹಿತಿ ಬಳಸಿಕೊಂಡು ನಕಲಿ ಕಾರ್ಡ್ ಸೃಷ್ಟಿಸಿ ಹಣ ಲಪಟಾಯಿಸುವ ದಂಧೆ ಜೋರಾಗಿದೆ ಎಂದು ಐಬಿಎ ಗ್ರೂಪ್ ವರದಿಯಲ್ಲಿ ಎಚ್ಚರಿಸಿತ್ತು.
Comments are closed.