ನವದೆಹಲಿ: ಮೊಬೈಲ್ಫೋನ್ ಬಳಕೆದಾರರು ತಮ್ಮ ಮೊಬೈಲ್ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಅದು ಇನ್ಮುಂದೆ ಕೇವಲ 30 ಸೆಕೆಂಡ್ ರಿಂಗಣಿಸಲಿದೆ! ಅಂತೆಯೇ ಲ್ಯಾಂಡ್ಲೈನ್ ಫೋನ್ಗಳು 60 ಸೆಕೆಂಡ್ ರಿಂಗಣಿಸಲಿವೆ!
ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ. ಮೊಬೈಲ್ಫೋನ್ಗಳ ರಿಂಗಣವನ್ನು 30 ಸೆಕೆಂಡ್ಗಳಿಗೆ ಮತ್ತು ಲ್ಯಾಂಡ್ಲೈನ್ ಫೋನ್ಗಳ ರಿಂಗಣವನ್ನು 60 ಸೆಕೆಂಡ್ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆದೇಶ ಹೊರಡಿಸಿದೆ.
ಒಳಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್ಫೋನ್ ಮತ್ತು ಲ್ಯಾಂಡ್ಲೈನ್ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಟ್ರಾಯ್ ಹೇಳಿದೆ.
ಕರೆ ರಿಂಗಣ ಸಮಯದ ವಿಷಯವಾಗಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮೊಬೈಲ್ಫೋನ್ಗಳ ರಿಂಗಣ ಸಮಯವನ್ನು 45 ಸೆಕೆಂಡ್ಗಳಿಗೆ ನಿಗದಿಪಡಿಸಬೇಕು. ಆ ಮೂಲಕ ಕರೆ ಸ್ವೀಕರಿಸುತ್ತಿರುವ ನೆಟ್ವರ್ಕ್ಗೆ ಕರೆ ಸ್ವೀಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕು ಎಂದು ಭಾರ್ತಿ ಏರ್ಟೆಲ್ ವಾದಿಸಿತ್ತು. ಈ ಅವಧಿಯನ್ನು 20ರಿಂದ 25 ಸೆಕೆಂಡ್ಗೆ ಸೀಮಿತಗೊಳಿಸಬೇಕು ಎಂದು ರಿಲಯನ್ಸ್ ಜಿಯೋ ಪ್ರತಿಪಾದಿಸಿತ್ತು. ಆದರೆ ವೊಡೋಫೋನ್ ಐಡಿಯಾ ಮಾತ್ರ ರಿಂಗಣದ ಸಮಯವನ್ನು 30 ಸೆಕೆಂಡ್ಗೆ ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿತ್ತು.
Comments are closed.