ಕೊಲ್ಕತ್ತಾ : ದೆಹಲಿಯ ಹೈಕೋರ್ಟ್ ಸೂಚನೆಯ ಮೇರೆಗೆ ಇದೀಗ ಶಾಲೆಗಳಲ್ಲಿ ಆರೋಗ್ಯಕರ ಆಹಾರ ಪದ್ದತಿ ಅಳವಡಿಸಿಕೊಳ್ಳಲು ಅಗತ್ಯ ಕರಡು ನಿಯಮಾವಳಿಯನ್ನು ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ ಸಿದ್ದಪಡಿಸಿದೆ. ಇಂತಹ ಸಿದ್ದಗೊಂಡಿರುವ ಆರೋಗ್ಯಕರ ಆಹಾರ ಪದ್ದತಿಯ ಕ್ರಮದಲ್ಲಿ ಅಧಿಕ ಪ್ರಮಾಣದ ಉಪ್ಪು, ಕೊಬ್ಬು ಹಾಗೂ ಸಕ್ಕರೆ ಅಂಶವಿರುವ ಜಂಕ್ ಪುಡ್ ಗಳನ್ನು ಶಾಲಾ ಆವರಣದಲ್ಲಿ ಪೂರೈಕೆ ಅಥವಾ ಮಾರಾಟ ಮಾಡುವುದನ್ನು ಸದ್ಯದಲ್ಲಿಯೇ ನಿಷೇಧಿಸಲಿದೆ.
ಹೌದು… ದೆಹಲಿ ಹೈಕೋರ್ಟ್ ಶಾಲಾ ಆವರಣದಲ್ಲಿ ಆರೋಗ್ಯಕರ ಆಹಾರ ಪದ್ದತಿ ಅಳವಡಿಸಿಕೊಳ್ಳುವಂತೆ ಆಹಾರ ಪ್ರಾಧಿಕಾರಕ್ಕೆ ಕಳೆದ 2015ರಂದು ಸೂಚನೆ ನೀಡಿತ್ತು. ಇಂತಹ ಸೂಚನೆಗೆ ಆರೋಗ್ಯಕರ ಆಹಾರ ಪದ್ದತಿಯ ಮಾರ್ಗಸೂಚಿ ಸಿದ್ದಪಡಿಸಿಕೊಂಡಿರುವ ಭಾರತೀಯ ಆಹಾರ ಪ್ರಾಧಿಕಾರ, ಇದೀಗ ತನ್ನ ಮಾರ್ಗ ಸೂಚಿಯನ್ನು ಸಾರ್ವಜನಿಕರ ಪ್ರಕ್ರಿಯೆಗಾಗಿ ಬಿಡುಗಡೆ ಮಾಡಿದೆ.
ಎಫ್ ಎಸ್ ಎಸ್ ಎ ಐ ಸಿದ್ದಪಡಿಸಿರುವ ಶಾಲಾ ಆಪರಣದಲ್ಲಿನ ಆರೋಗ್ಯಕರ ಆಹಾರ ಪದ್ದತಿಯ ಅನುಸಾರದ ಮಾರ್ಗಸೂಚಿಯಲ್ಲಿ, ಅಧಿಕ ಪ್ರಾಮಾಣದ ಉಪ್ಪು, ಕೊಬ್ಬು ಹಾಗೂ ಸಕ್ಕರೆ ಅಂಶವಿರುವ ಜಂಕ್ ಪುಡ್ ಗಳ ಮಾರಾಟಕ್ಕೆ ನಿಷೇಧಿಸಿದೆ. ಅಲ್ಲದೇ ಶಾಲೆಗಳಲ್ಲಿ ಆಹಾರ ವಿತರಿಸುವ ಶಿಕ್ಷಣ ಸಂಸ್ಥೆಗಳು ಮತ್ತು ಆಹಾರ ಪೂರೈಕೆದಾರರು ಇಂತಹ ಮಾರ್ಗಸೂಚಿ ನಿಯಮದ ಅನುಸಾರ ಆಹಾರ ಪೂರೈಕೆ ಮಾಡಲು ಪರವಾನಗಿ ಪಡೆಯಬೇಕು ಎಂಬುದಾಗಿಯೂ ತಿಳಿಸಿದೆ.
ಹೀಗಿದೆ ಕರಡು ನಿಯಮಾವಳಿಗಳಲ್ಲಿನ ಅಂಶಗಳು
ಅಧಿಕ ಪ್ರಮಾಣದ ಕೊಬ್ಬು, ಉಪ್ಪು ಹಾಗೂ ಸಕ್ಕರೆ ಅಂಶವಿರುವ ಆಹಾರವನ್ನು ಶಾಲೆಯಿಂದ 50 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮಾಡುವಂತಿಲ್ಲ
ಕಡಿಮೆ ಪೌಷ್ಠಿಕಾಂಶವಿರುವ ಕೋಲಾ, ಆಲೂ ಚಿಪ್ಸ್ ಮುಂತಾದ ಆಹಾರದ ಉಚಿತ ಸ್ಯಾಂಪಲ್ ವಿತರಣೆ ಹಾಗೂ ನೇರ ಮಾರಾಟವನ್ನು ನಿಷೇಧಿಸಲಾಗಿದೆ.
ತಿಂಡಿಯಲ್ಲಿ 100-150 ಕ್ಯಾಲರಿ, ಊಟದಲ್ಲಿ 300-350 ಕ್ಯಾಲರಿ ಇರಬೇಕೆಂದು ನಿಯಮ ವಿಧಿಸಿದೆ.
15-20 ಗ್ರಾಂ ಪ್ರೊಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳಿರುವಂತ ಹಣ್ಣು-ತರಕಾರಿ ಕಡ್ಡಾಯ
ಇಂತಹ ನಿಯಮಾವಳಿಗಳ ಪಾಲನೆಗಾಗಿ ಎಲ್ಲಾ ಶಾಲೆಗಳಲ್ಲೂ ಕಣ್ಗಾವಲು ಘಟಕಗಳನ್ನು ತೆರೆಯುವುದು ಖಡ್ಡಾಯ
ಈ ಮೊದಲಾದ ಕರಡು ನಿಯಮಾವಳಿಗಳನ್ನು ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ ಸಿದ್ದಪಡಿಸಿದ್ದು, ಇದರ ಅನುಸಾರವೇ ಇನ್ಮುಂದೆ ದೇಶದ ಎಲ್ಲಾ ಶಾಲೆಗಳು ಆರೋಗ್ಯಕರ ಆಹಾರ ಪದ್ದತಿಯ ಕ್ರಮವನ್ನು ಅನುಸರಿಸಬೇಕಿದೆ. ಈ ನಿಮಯಗಳ ಕರಡಿಗೆ ಡಿಸೆಂಬರ್ 3ರ ಒಳಗಾಗಿ ಆಕ್ಷೇಪಣೆಗಳಿದ್ದರೇ ಸಾರ್ವಜನಿಕರು ಸಲ್ಲಿಸಬಹುದಾಗಿದೆ.
Comments are closed.